ನವದೆಹಲಿ:ದೇಶೀಯ ನಿರ್ಮಿತ ನೌಕಾಪಡೆ ಆವೃತ್ತಿಯ ಲಘು ಯುದ್ಧ ವಿಮಾನ 'ತೇಜಸ್'ದೇಶದ ಏಕೈಕ ಯುದ್ಧವಿಮಾನ ವಾಹಕ ಹಡಗು 'ಐಎನ್‌ಎಸ್ ವಿಕ್ರಮಾದಿತ್ಯ'ದಲ್ಲಿ ಇಳಿದು, ಮತ್ತೆ ಹಾರಾಟ ನಡೆಸಿದೆ. ಹಡಗು ತಟ್ಟೆಯಿಂದ ಹಾರುವಯುದ್ಧ ವಿಮಾನದ ಸ್ವದೇಶಿ ನಿರ್ಮಾಣ ಕ್ಷೇತ್ರದಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ.
ಅರಬಿ ಸಮುದ್ರ ಭಾಗದಲ್ಲಿ ನಿಯೋಜನೆಗೊಂಡಿರುವ ಐಎನ್‌ಎಸ್ ವಿಕ್ರಮಾದಿತ್ಯ ಪ್ರಸ್ತುತ ನೌಕಾಪಡೆ ಆವೃತ್ತಿಯ 'ಮಿಗ್–29' ಯುದ್ಧ ವಿಮಾನ ಹೊಂದಿದೆ. ವಿಕ್ರಮಾದಿತ್ಯ 30 ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ವಿಸ್ತಾರ ಮತ್ತು ಸಾಮರ್ಥ್ಯ ಹೊಂದಿದೆ.
ಈ ವಿಮಾನವು ಕಳೆದ ಸೆಪ್ಟೆಂಬರ್‌ನಲ್ಲಿ 'ಅರೆಸ್ಟ್ ಲ್ಯಾಂಡಿಂಗ್' (ನಿರ್ಬಂಧಿತ ಇಳಿಕೆ) ಪರೀಕ್ಷೆಯಲ್ಲಿ ಯಶಸ್ವಿಯಾಗಿತ್ತು.
'ಶನಿವಾರ ನಡೆದಿರುವ ಪರೀಕ್ಷೆಯಿಂದ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವು ನೌಕಾಪಡೆಯ ಕಾರ್ಯಾಚರಣೆಗೆ ಯಶಸ್ವಿಯಾಗಿ ಅಳವಡಿಸಿಕೊಳ್ಳುವುದು ಸ್ಪಷ್ಟವಾಗಿದೆ. ಟ್ವಿನ್ ಎಂಜಿನ್ ಯುದ್ಧ ವಿಮಾನಗಳನ್ನು ತಯಾರಿಸಲು ರಹದಾರಿ ಸೃಷ್ಟಿಯಾಗಿದೆ' ಎಂದು ಭಾರತೀಯ ನೌಕಾಪಡೆ ಟ್ವೀಟ್ ಮಾಡಿದೆ.
ಭಾರತಕ್ಕೆ ನೌಕಾಪಡೆ ಆವೃತ್ತಿಯ 57 ಯುದ್ಧ ವಿಮಾನಗಳ ಅವಶ್ಯಕತೆಯಿದೆ.
ಹಲವು ಬಾರಿ ನಿರ್ಬಂಧಿತ ಇಳಿಕೆ ಪರೀಕ್ಷೆ ನಡೆಸಿದ ಅನುಭವ ಹೊಂದಿರುವ ತೇಜಸ್ ಐಎನ್‌ಎಸ್ ವಿಕ್ರಮಾದಿತ್ಯದ ಮೇಲೆ ಬೆಳಿಗ್ಗೆ 10:02ಕ್ಕೆ ಯಶಸ್ವಿಯಾಗಿ ಇಳಿಯಿತು.ಪರೀಕ್ಷೆ ಯಶಸ್ವಿಯಾಗುತ್ತಿದ್ದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್‌ಡಿಒ ಮತ್ತು ಭಾರತೀಯ ನೌಕಾಪಡೆಗೆ ಅಭಿನಂದನೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.