ಗುರುವಾರ , ಡಿಸೆಂಬರ್ 3, 2020
19 °C

ಬಿಹಾರ: ಎನ್‌ಡಿಎ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಶತ್ರುಘ್ನ ಸಿನ್ಹಾಗೆ ಟಿಕೆಟ್‌ ಇಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ 40 ಲೋಕಸಭಾ ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಬಿಜೆಪಿಯಿಂದ ನಟ ಶತ್ರುಘ್ನ ಸಿನ್ಹಾ ಬದಲಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. 

ಪಟ್ನಾ ಸಾಹಿಬ್‌ ಲೋಕಸಭಾ ಕ್ಷೇತ್ರವನ್ನು ಶತ್ರುಘ್ನ ಸಿನ್ಹಾ ಎರಡು ಬಾರಿ ಪ್ರತಿನಿಧಿಸಿದ್ದರು. ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಮೋದಿ ಸರ್ಕಾರವನ್ನು ಟೀಕೆ ಮಾಡುತ್ತಲೇ ಬಂದಿದ್ದರು. ರಫೇಲ್‌ ಪ್ರಕರಣ, ಜಿಎಸ್‌ಟಿ, ನೋಟು ರದ್ದತಿ ಕುರಿತಂತೆ ಕಟುವಾಗಿ ಟೀಕೆ ಮಾಡಿದ್ದರು. ಹಾಗಾಗಿ ಬಿಜೆಪಿ ಈ ಬಾರಿ ಸಿನ್ಹಾಗೆ ಟಿಕೆಟ್‌ ನಿರಾಕರಿಸಿದೆ. ಪಟ್ನಾ ಸಾಹಿಬ್‌ ಕ್ಷೇತ್ರಕ್ಕೆ ರವಿಶಂಕರ್‌ ಪ್ರಸಾದ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. 

ಕೇಂದ್ರ ಸಚಿವರಾದ ಗಿರಿರಾಜ್‌ ಸಿಂಗ್‌, ರಾಧ ಮೋಹನ್‌ ಸಿಂಗ್, ಪ್ರತಾಪ್‌ ಸಿಂಗ್‌ ರೂಡಿ ಅವರಿಗೂ ಟಿಕೇಟ್‌ ನೀಡಲಾಗಿದೆ. ಎನ್‌ಡಿಎ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಂದರ್ಭದಲ್ಲಿ ಬಿಹಾರ ಬಿಜೆಪಿ ಮುಖ್ಯಸ್ಥ ನಿತ್ಯಾನಂದ ರೈ, ಜೆಡಿಯು ಅಧ್ಯಕ್ಷ ವಶಿಷ್ಠ ನಾರಾಯಣ ಸಿಂಗ್‌, ಎಲ್‌ಜೆಪಿ ವರಿಷ್ಠ ಪಶುಪತಿ ಪರಾಸ್‌ ಇದ್ದರು. 

ಬಿಜೆಪಿ ಮತ್ತು ಜೆಡಿಯು ತಲಾ 17 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ಎನ್‌ಡಿಎ ಅಂಗಪಕ್ಷವಾದ ಎಲ್‌ಜೆಪಿ 6 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು