ಜಿ–20 ನಾಯಕರನ್ನು ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ ಮೋದಿ

7

ಜಿ–20 ನಾಯಕರನ್ನು ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ ಮೋದಿ

Published:
Updated:

ಬ್ಯೂನಸ್: ಭಾರತ 2022ರಲ್ಲಿ ಜಿ–20 ಶೃಂಗಸಭೆ ಆಯೋಜಿಸುವುದಾಗಿ ಅರ್ಜೆಂಟಿನಾದ ಬ್ಯೂನಸ್‌ ಐರಿಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದರು.

ಜಗತ್ತಿನ ಪ್ರಮುಖ ಆರ್ಥಿಕತೆಯನ್ನು ಹೊಂದಿರುವ ಇಪ್ಪತ್ತು ರಾಷ್ಟ್ರಗಳ ಜಿ–20 ಶೃಂಗಸಭೆಯ ಎರಡನೇ ದಿನ ಪ್ರಧಾನಿ ಮೋದಿ ಈ ಘೋಷಣೆ ಮಾಡಿದರು. ನಿಗದಿಯಂತೆ 2020ರಲ್ಲಿ ಶೃಂಗಸಭೆಯ ಆಯೋಜನೆಯನ್ನು ಇಟಲಿ ನಿರ್ವಹಿಸಬೇಕಿತ್ತು. 

ಭಾರತದ 75ನೇ ಸ್ವಾತಂತ್ರ್ಯೋತ್ಸವ ವರ್ಷವೂ ಆಗಿರುವ 2022ರಲ್ಲಿ ಜಿ–20 ಶೃಂಗಸಭೆಗೆ ಎಲ್ಲ ನಾಯಕರನ್ನು ಪ್ರಧಾನಿ ಮೋದಿ ಆಹ್ವಾನಿಸಿದರು. ಆಯೋಜನೆಗೆ ಅವಕಾಶ ಮಾಡಿಕೊಟ್ಟ ಇಟಲಿಗೆ ಮೋದಿ ಧನ್ಯವಾದ ತಿಳಿಸಿದರು. 

’ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿರುವ ಭಾರತಕ್ಕೆ ಬನ್ನಿ. ಭಾರತದ ವೈವಿದ್ಯಮಯ ಹಾಗೂ ಭವ್ಯ ಇತಿಹಾಸವನ್ನು ತಿಳಿಯಲು ಬನ್ನಿ, ದೇಶದ ಆತಿಥ್ಯವನ್ನು ಸ್ವೀಕರಿಸಿ’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. 

ಜಿ–20 ಸದಸ್ಯ ರಾಷ್ಟ್ರಗಳಾದ ಅರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರೆಜಿಲ್‌, ಕೆನಡಾ, ಚೀನಾ, ಯುರೋಪ್‌ ಒಕ್ಕೂಟ, ಫ್ರಾನ್ಸ್‌, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್‌, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಇಂಗ್ಲೆಂಡ್‌(ಯುಕೆ), ಅಮೆರಿಕ ಜಗತ್ತಿನ ಶೇ 80ರಷ್ಟು ವಹಿವಾಟು, ಮೂರನೇ ಎರಡು ಭಾಗ ಜನಸಂಖ್ಯೆ, ಜಗತ್ತಿನ ಅರ್ಥ ಭೂಭಾಗ ಹಾಗೂ ಶೇ 90ರಷ್ಟು ಉತ್ಪನ್ನಗಳನ್ನು ಒಳಗೊಂಡಿವೆ. ಸ್ಟೇನ್‌ ಶಾಶ್ವತ ಅತಿಥಿ ರಾಷ್ಟ್ರವಾಗಿದೆ. 

 

Tags: 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !