ಗುರುವಾರ , ಏಪ್ರಿಲ್ 2, 2020
19 °C

ನಿರ್ಭಯಾ ಅತ್ಯಾಚಾರಿಗಳಿಗೆ ಮಾರ್ಚ್‌ 3ರಂದು ಗಲ್ಲು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನಿರ್ಭಯಾ ಅತ್ಯಾಚಾರಿಗಳನ್ನು ಮಾರ್ಚ್‌ 3ರಂದು ಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸಬೇಕು ಎಂದು ದೆಹಲಿ ನ್ಯಾಯಾಲಯ  ಸೋಮವಾರ ಹೊಸ ವಾರಂಟ್‌ ಜಾರಿ ಮಾಡಿದೆ.  

ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವಂತೆ ಕೋರಿ ನಾಲ್ವರು ಅಪರಾಧಿಗಳ ಪೈಕಿ ವಿನಯ್‌ ರಾಷ್ಟ್ರಪತಿ ಮುಂದೆ  ಕ್ಷಮಾದಾನ ಅರ್ಜಿ ಸಲ್ಲಿಸಿದ. ಬಳಿಕ ರಾಷ್ಟ್ರಪತಿಗಳು ಈ ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ವಿನಯ್‌ ನ್ಯಾಯಾಲಯದ ಮೊರೆ ಹೋಗಿದ್ದ. 

ಅಪರಾಧಿಗಳಾದ ಪವನ್‌ ಗುಪ್ತಾ (25), ವಿನಯ ಕುಮಾರ್‌ ಶರ್ಮಾ(26),ಅಕ್ಷಯ್‌ ಕುಮಾರ್‌(31) ಮತ್ತು ಮುಕೇಶ್‌ ಕುಮಾರ್‌ ಸಿಂಗ್‌ಗೆ (32) ಗಲ್ಲು ಶಿಕ್ಷೆಯನ್ನು ಎರಡು ಸಲ ಮುಂದೂಡಲಾಗಿತ್ತು. ಈ ಮೊದಲು ಜನವರಿ 22ರಂದು ಗಲ್ಲು ಶಿಕ್ಷೆ ವಿಧಿಸುವಂತೆ ‘ಡೆತ್‌ ವಾರಂಟ್‌’ ಜಾರಿಗೊಳಿಸಲಾಗಿತ್ತು. ಬಳಿಕ, ಫೆಬ್ರುವರಿ 1ಕ್ಕೆ ಮುಂದೂಡಲಾಗಿತ್ತು.

ಇದೀಗ ದೆಹಲಿ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆ ಮಾರ್ಚ್‌ 3ರಂದು ಗಲ್ಲಿಗೇರಿಸಬೇಕು ಎಂದು ಹೊಸ ವಾರೆಂಟ್‌ ಹೊರಡಿಸಿದೆ. 

ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳು ತಿಹಾರ್‌ ಜೈಲಿನಲ್ಲಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು