ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chronology| ಅತ್ಯಾಚಾರದಿಂದ ನೇಣುಗಂಬದ ವರೆಗೆ..!

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣದ ಈ ವರೆಗಿನ ಘಟನಾವಳಿ
Last Updated 19 ಮಾರ್ಚ್ 2020, 15:24 IST
ಅಕ್ಷರ ಗಾತ್ರ

ದೆಹಲಿಯ ಯುವತಿ ‘ನಿರ್ಭಯಾ’ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ದುರುಳರಿಂದ ಬಸ್‌ನಿಂದ ಹೊರದಬ್ಬಿಸಿಕೊಂಡ ಆ ದಿನಕ್ಕೆ ಈಗ 8 ವರ್ಷಗಳು (2012ರ ಡಿಸೆಂಬರ್ 16) ಕಳೆದಿವೆ.

ಇದಾದ ನಂತರ ಆರೋಪಿಗಳ ಬಂಧನ, ಆರೋಪಪಟ್ಟಿ ಸಲ್ಲಿಕೆ, ತನಿಖೆ, ವಿಚಾರಣೆ, ತೀರ್ಪು, ಮೇಲ್ಮನವಿ ಹೀಗೆ ಹಲವು ಪ್ರಕ್ರಿಯೆಗಳು ನಡೆದಿವೆ. ಎಂಟು ವರ್ಷಗಳಲ್ಲಿ ‘ನಿರ್ಭಯಾ’ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಡೆದ ಪ್ರಮುಖ ಘಟನಾವಳಿಗಳ ಟೈಮ್‌ಲೈನ್ ಇಲ್ಲಿದೆ:

* 2012ರ ಡಿಸೆಂಬರ್ 16: ದೆಹಲಿಯಲ್ಲಿ ರಾತ್ರಿ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ. ಬರ್ಬರ ಹಲ್ಲೆ ನಡೆಸಿ, ಚಲಿಸುವ ಬಸ್‌ನಿಂದ ಎಸೆದಿದ್ದ ದುಷ್ಕರ್ಮಿಗಳು

*2012ರ ಡಿಸೆಂಬರ್ 29: ಗಂಭೀರ ಸ್ಥಿತಿಯಲ್ಲಿದ್ದ ‘ನಿರ್ಭಯಾ’ ಸಿಂಗಪುರದ ಆಸ್ಪತ್ರೆಯಲ್ಲಿ ಸಾವು

* 2013 ಜನವರಿ 28: ಪ್ರಕರಣದ ಆರನೇ ಆರೋಪಿ ಅಪ್ರಾಪ್ತ ಎಂದು ಬಾಲ ನ್ಯಾಯ ಮಂಡಳಿ ಘೋಷಣೆ

* 2013 ಫೆಬ್ರುವರಿ 2: ಐವರು ಆರೋಪಿಗಳ ವಿರುದ್ಧ ಕೊಲೆಯೂ ಸೇರಿ 13 ಅಪರಾಧ ಪ್ರಕರಣ ದಾಖಲು

* 2013 ಮಾರ್ಚ್‌ 11: ಆರು ಆರೋಪಿಗಳ ಪೈಕಿ ರಾಮ್‌ಸಿಂಗ್ ಎಂಬಾತ ಜೈಲಿನಲ್ಲಿ ಖಿನ್ನತೆಯಿಂದ ಆತ್ಮಹತ್ಯೆ

*2013 ಮಾರ್ಚ್‌ 21: ಅತ್ಯಾಚಾರಕ್ಕೆ ಸಂಬಂಧಿಸಿ ಕಾನೂನಿನಲ್ಲಿ ತಿದ್ದುಪಡಿ, ಕಠಿಣ ಶಿಕ್ಷೆ ನೀಡಲು ಅವಕಾಶ

*2013 ಆಗಸ್ಟ್‌ 31: ಬಾಲಾಪರಾಧಿಗೆ ಮೂರು ವರ್ಷ ರಿಮಾಂಡ್‌ ಹೋಮ್‌ನಲ್ಲಿ ಶಿಕ್ಷೆ; ಬಿಡುಗಡೆ

* 2013 ಸೆಪ್ಟೆಂಬರ್ 10: ವಿಚಾರಣೆ ಪೂರ್ಣಗೊಳಿಸಿದ ತ್ವರಿತಗತಿಯ ನ್ಯಾಯಾಲಯ, ಆರೋಪ ಸಾಬೀತು

* 2013 ಸೆಪ್ಟೆಂಬರ್ 13: ಅಪರಾಧಿಗಳಿಗೆ ಮರಣದಂಡನೆ ವಿಧಿಸಿದತ್ವರಿತಗತಿಯ ನ್ಯಾಯಾಲಯ. ಮರಣದಂಡನೆ ದೃಢೀಕರಿಸುವಂತೆ ದೆಹಲಿ ಹೈಕೋರ್ಟ್‌ಗೆ ಶಿಫಾರಸು

* 2013 ನವೆಂಬರ್ 1: ಪ್ರತಿದಿನ ವಿಚಾರಣೆ ಆರಂಭಿಸಿದ ದೆಹಲಿ ಹೈಕೋರ್ಟ್‌

* 2014 ಮಾರ್ಚ್‌ 13: ನಾಲ್ವರು ಅಪರಾಧಿಗಳಿಗೆ ವಿಧಿಸಲಾಗಿರುವ ಮರಣದಂಡನೆ ಎತ್ತಿಹಿಡಿದ ದೆಹಲಿ ಹೈಕೋರ್ಟ್‌

* 2016 ಏಪ್ರಿಲ್ 3: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಆರಂಭ

* 2017 ಮಾರ್ಚ್ 27: ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

* 2017 ಮೇ 5: ಅಕ್ಷಯ್, ವಿನಯ್ ಶರ್ಮಾ, ಪವನ್ ಗುಪ್ತಾ ಮತ್ತು ಮುಕೇಶ್ ಸಿಂಗ್‌ಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

* 2018 ಜುಲೈ 9:ಪವನ್, ಮುಕೇಶ್ ಮತ್ತು ವಿನಯ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

* 2018 ಡಿಸೆಂಬರ್ 13: ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವಂತೆ ಮನವಿ ಮಾಡಿ ದೆಹಲಿಯ ಪಾಟಿಯಾಲ ಹೌಸ್ ನ್ಯಾಯಾಲಯಕ್ಕೆ ನಿರ್ಭಯಾ ಪೋಷಕರಿಂದ ಮನವಿ

* 2019 ಅಕ್ಟೋಬರ್ 29: ಅಪರಾಧಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ನೀಡಿಕೆ

* 2019 ನವೆಂಬರ್ 8: ಕ್ಷಮಾದಾನ ಅರ್ಜಿ ಸಲ್ಲಿಸಿದ ವಿನಯ್ ಶರ್ಮಾ

* 2019 ಡಿಸೆಂಬರ್ 6:ವಿನಯ್ ಶರ್ಮಾಕ್ಷಮಾದಾನ ಅರ್ಜಿ ತಿರಸ್ಕರಿಸುವಂತೆ ದೆಹಲಿ ಸರ್ಕಾರದಿಂದ ರಾಷ್ಟ್ರಪತಿಗಳಿಗೆ ಶಿಫಾರಸು

*2019 ಡಿಸೆಂಬರ್ 10: ಅಪರಾಧಿ ಅಕ್ಷಯ್‌ನಿಂದ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆ

*2019 ಡಿಸೆಂಬರ್ 17:ಮರುಪರಿಶೀಲನಾ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ

*2019 ಡಿಸೆಂಬರ್ 18:ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌. ಕ್ಷಮಾದಾನ ಅರ್ಜಿ ಸಲ್ಲಿಸಲು ಅಕ್ಷಯ್‌ಗೆ 3 ವಾರಗಳ ಕಾಲಾವಕಾಶ

2019 ಡಿಸೆಂಬರ್ 19: ಅತ್ಯಾಚಾರದ ಸಂದರ್ಭದಲ್ಲಿ ತಾನು ಬಾಲಪರಾಧಿ ಎಂದು ಆರೋಪಿಸಿ ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತು.

2020 ಜನವರಿ 7: ನಾಲ್ವರು ಅಪರಾಧಿಗಳಿಗೆ ಜ. 22ರಂದು ಬೆಳಿಗ್ಗೆ 7ಗಂಟೆಗೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಬೇಕೆಂದು ಪಟಿಯಾಲ ನ್ಯಾಯಾಲಯ ಡೆತ್ ವಾರೆಂಟ್ ಹೊರಡಿಸಿತು.

2020 ಜನವರಿ 14: ಮುಕೇಶ್ ಕುಮಾರ್ ಮತ್ತು ವಿನಯ್ ಶರ್ಮಾ ಸಲ್ಲಿಸಿದ್ದ ಪರಿಹಾರಾತ್ಮಕ (ಕ್ಯುರೇಟಿವ್) ಅರ್ಜಿಗಳನ್ನು ನ್ಯಾಯಾಧೀಶರಾದ ಎನ್.ವಿ.ರಮಣ, ಅರುಣ್ ಮಿಶ್ರಾ, ಆರ್.ಎಫ್.ನಾರಿಮನ್, ಆರ್.ಬಾನುಮತಿ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠ ತಿರಸ್ಕರಿಸಿತು. ನಂತರ ಮುಕೇಶ್ ಕುಮಾರ್‌ನಿಂದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಕ್ಷಮಾದಾನದ ಅರ್ಜಿ ಸಲ್ಲಿಕೆ.

2020 ಜನವರಿ 16: ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಜ. 22ರಂದು ಬೆಳಿಗ್ಗೆ 7ಕ್ಕೆ ಗಲ್ಲಿಗೇರಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ತಿಹಾರ್‌ ಜೈಲು ಅಧಿಕಾರಿಗಳಿಗೆ ದೆಹಲಿ ಕೋರ್ಟ್‌ ಸೂಚನೆ

2020 ಜನವರಿ 17: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಮುಕೇಶ್ ಕುಮಾರ್‌ನ ಕ್ಷಮಾದಾನದ ಅರ್ಜಿ ತಿರಸ್ಕೃತ.

2020 ಜನವರಿ 20: ಅಕ್ಷಯ್‌ ಕುಮಾರ್ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿ ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಿಂದ ವಜಾ

2020 ಜನವರಿ 23: ಅಪರಾಧಿಗಳಿಗೆ ಗಲ್ಲುಶಿಕ್ಷೆ ವಾರಂಟ್ ಹೊರಡಿಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಅವರಿಗೆ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ರಿಜಿಸ್ಟ್ರಾರ್‌ ಹುದ್ದೆಗೆ ವರ್ಗಾವಣೆ

2020 ಜನವರಿ 25: ಕ್ಷಮಾದಾನದ ಅರ್ಜಿ ತಿರಸ್ಕರಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ಮಕೇಶ್ ಕುಮಾರ್.

2020 ಜನವರಿ 28: ಅಪರಾಧಿ ಅಕ್ಷಯ್ ಕುಮಾರ್‌ನಿಂದ ಸುಪ್ರೀಂ ಕೋರ್ಟ್‌ಗೆ ಪರಿಹಾರಾತ್ಮಕ ಅರ್ಜಿ ಸಲ್ಲಿಕೆ

2020 ಜನವರಿ 29: ಜ. 28ರ ಅರ್ಜಿಯ ತೀರ್ಪನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್, ಅಕ್ಷಯ್ ಕುಮಾರ್‌ನ ಅರ್ಜಿಯ ವಿಚಾರಣೆ ನಡೆಸಲು ತಿರಸ್ಕರಿಸಿತು.

2020 ಜನವರಿ 30: ಅಕ್ಷಯ್ ಕುಮಾರ್‌ನ ಪರಿಹಾರಾತ್ಮಕ (ಕ್ಯುರೇಟಿವ್) ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

2020 ಜನವರಿ 31: ವಿನಯ್ ಶರ್ಮಾ ಮತ್ತು ಅಕ್ಷಯ್‌ ಕುಮಾರ್ ಅವರ ಕ್ಷಮಾದಾನದ ಅರ್ಜಿಗಳು ಇನ್ನೂ ಬಾಕಿ ಇರುವುದರಿಂದ ದೆಹಲಿಯ ವಿಚಾರಣಾ ನ್ಯಾಯಾಲಯವು ಮುಂದಿನ ಆದೇಶದವರೆಗೆ ಅಪರಾಧಿಗಳ ಡೆತ್ ವಾರೆಂಟ್‌ಗಳನ್ನು ಅಮಾನತುಗೊಳಿಸಿತು.

2020 ಫೆಬ್ರುವರಿ 1: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದವಿನಯ್ ಶರ್ಮಾನ ಕ್ಷಮಾದಾನದ ಅರ್ಜಿ ತಿರಸ್ಕಾರ.

2020 ಫೆಬ್ರುವರಿ 2:ಅಪರಾಧಿಗಳಿಗೆ ಗಲ್ಲು ವಿಧಿಸುವುದಕ್ಕೆ ನೀಡಿರುವ ತಡೆಯನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ಕುರಿತಂತೆ ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

2020 ಫೆಬ್ರುವರಿ 5: ರಾಷ್ಟ್ರಪತಿ ಅವರಿಂದ ಅಕ್ಷಯ್ ಕುಮಾರ್‌ನ ಕ್ಷಮಾದಾನದ ಅರ್ಜಿ ತಿರಸ್ಕಾರ. ಅಪರಾಧಿಗಳ ಗಲ್ಲು ಶಿಕ್ಷೆಯನ್ನು ತಡೆಹಿಡಿದ ದೆಹಲಿ ಹೈಕೋರ್ಟ್‌ನಿಂದ ಅಪರಾಧಿಗಳಿಗೆ ಒಂದು ವಾರದೊಳಗೆ ಕಾನೂನು ಪರಿಹಾರಗಳ ಕುರಿತು ಅರ್ಜಿ ಸಲ್ಲಿಸಲು ಅವಕಾಶ. ಅದೇ ದಿನ, ನಾಲ್ವರು ಅಪರಾಧಿಗಳನ್ನೂ ಒಟ್ಟಿಗೆ ಗಲ್ಲಿಗೇರಿಸಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ.

2020 ಫೆಬ್ರುವರಿ 6: ನಿರ್ಭಯಾ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಹೊಸದಾಗಿ ಡೆತ್ ವಾರೆಂಟ್ ನೀಡುವಂತೆ ಕೋರಿ ದೆಹಲಿ ನ್ಯಾಯಾಲಯಕ್ಕೆ ತಿಹಾರ್ ಜೈಲಿನ ಅಧಿಕಾರಿಗಳಿಂದಅರ್ಜಿ ಸಲ್ಲಿಕೆ

2020 ಫೆಬ್ರುವರಿ 11: ನಿರ್ಭಯಾ ಅಪರಾಧಿಗಳ ಗಲ್ಲುಶಿಕ್ಷೆಗೆ ಹೊಸ ದಿನಾಂಕ ನಿಗದಿಪಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಕೋರಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಿಂದ ಅನುಮತಿ.

2020 ಫೆಬ್ರುವರಿ 11:ದೆಹಲಿ ಹೈಕೋರ್ಟ್ ನೀಡಿದ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸು
ವಂತೆ, ನಾಲ್ವರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ನೋಟಿಸ್.

2020 ಫೆಬ್ರುವರಿ 14: ಕ್ಷಮಾದಾನದ ಅರ್ಜಿ ವಿರುದ್ಧ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿ, ಸುಪ್ರೀಂ ಕೋರ್ಟ್‌ನಿಂದ ತಿರಸ್ಕಾರ.

2020 ಫೆಬ್ರುವರಿ 14:‘ನಿರ್ಭಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮುಂದೆ ಸದ್ಯ ಯಾವುದೇ ಅಪರಾಧಿಯ ಮೇಲ್ಮನವಿ ಬಾಕಿ ಇಲ್ಲ, ಜೊತೆಗೆ ಮೂವರು ಅಪರಾಧಿಗಳ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಅವರು ತಿರಸ್ಕರಿಸಿರುವ ಕಾರಣ ವಿಚಾರಣಾ ನ್ಯಾಯಾಲಯವು ಗಲ್ಲುಶಿಕ್ಷೆಗೆ ಹೊಸ ದಿನಾಂಕ ನಿಗದಿಪಡಿಸಬಹುದು’ ಎಂದು ಸುಪ್ರೀಂ ಕೋರ್ಟ್‌ ಸೂಚನೆ

2020 ಫೆಬ್ರುವರಿ 17: ಮಾರ್ಚ್ 3ರಂದು ಬೆಳಿಗ್ಗೆ 6ಕ್ಕೆ ನಾಲ್ವರು ಅಪರಾಧಿಗಳ ಗಲ್ಲುಶಿಕ್ಷೆಗೆ ಹೊಸ ಡೆತ್ ವಾರೆಂಟ್ ಹೊರಡಿಸಿದ ವಿಚಾರಣಾ ನ್ಯಾಯಾಲಯ

2020 ಫೆಬ್ರುವರಿ 22:‘ನಾನು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ನನಗೆ ಚಿಕಿತ್ಸೆ ಕೊಡಿಸಬೇಕೆಂದು’ ಎಂದು ವಿನಯ್ ಕುಮಾರ್ ಶರ್ಮಾ ಸಲ್ಲಿಸಿದ್ದ ಅರ್ಜಿ ದೆಹಲಿ ನ್ಯಾಯಾಲಯದಿಂದ ವಜಾ

2020 ಫೆಬ್ರುವರಿ 29:ಮರಣದಂಡನೆಗೆ ತಡೆ ಕೋರಿ ಅಪರಾಧಿಗಳಾದ ಅಕ್ಷಯ್‌ ಸಿಂಗ್‌ ಮತ್ತು ಪವನ್‌ ಕುಮಾರ್‌ ಗುಪ್ತಾ ನಿಂದ ದೆಹಲಿ ನ್ಯಾಯಾಲಯಕ್ಕೆ ಅರ್ಜಿ

2020 ಮಾರ್ಚ್ 2:ಅಪರಾಧಿಗಳಲ್ಲಿ ಒಬ್ಬನಾದ ಪವನ್‌ ಗುಪ್ತಾ, ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಸಿದ್ದರಿಂದ, ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಯನ್ನು ಮತ್ತೆ ಮುಂದೂಡಿದದೆಹಲಿಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ

2020 ಮಾರ್ಚ್ 4: ಪವನ್ ಕುಮಾರ್ ಗುಪ್ತಾ ಸಲ್ಲಿಸಿದ್ದ ದಯಾ ಅರ್ಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ತಿರಸ್ಕಾರ

2020 ಮಾರ್ಚ್‌ 5: ಮಾರ್ಚ್‌ 20ರಂದು ಬೆಳಿಗ್ಗೆ 5.30ಕ್ಕೆ ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯದಿಂದ ಹೊಸ ವಾರೆಂಟ್ ಪ್ರಕಟ.

2020 ಮಾರ್ಚ್ 6:‘ವಕೀಲರು ನನ್ನ ದಾರಿ ತಪ್ಪಿಸಿದ್ದಾರೆ. ನನಗೆ ನೀಡಲಾಗಿದ್ದ ಕಾನೂನು ಪರಿಹಾರ
ಗಳನ್ನು ಮತ್ತೊಮ್ಮೆ ನೀಡಬೇಕು’ ಎಂದು ಕೋರಿ ಮುಕೇಶ್ ಸಿಂಗ್‌ನಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

2020 ಮಾರ್ಚ್ 14:ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕ್ಷಮಾದಾನ ಅರ್ಜಿಯಲ್ಲಿ ತಿರಸ್ಕಾರ ಮಾಡುವ ಸಂದರ್ಭದಲ್ಲಿ ಸಾಂವಿಧಾನಿಕ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ, ಅಪರಾಧಿ ವಿನಯ್ ಶರ್ಮಾನಿಂದ ದೆಹಲಿ ಹೈಕೋರ್ಟ್‌ಗೆ ಮನವಿ

2020 ಮಾರ್ಚ್ 17: ತನಗೆ ವಿಧಿಸಿರುವ ಮರಣದಂಡನೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ನಿರ್ಭಯಾ ಪ್ರಕರಣದ ಅಪರಾಧಿ ಮುಕೇಶ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿ ದೆಹಲಿ ನ್ಯಾಯಾಲಯದಿಂದವಜಾ.

2020 ಮಾರ್ಚ್‌ 17: ‘ಅತ್ಯಾಚಾರಿಯ ಹೆಂಡತಿ ವಿಧವೆಯಾದಳು’ ಎಂಬ ಹಣೆಪಟ್ಟಿ ಪಡೆಯಲು ಇಷ್ಟವಿಲ್ಲವೆಂದು ಕಾರಣ ನೀಡಿ ವಿಚ್ಛೇದನಕ್ಕಾಗಿ ’ನಿರ್ಭಯಾ‘ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್‌ ಠಾಕೂರ್‌ನ ಪತ್ನಿ ಕೌಟುಂಬಿಕ ನ್ಯಾಯಾಲಯದ ಮೊರೆ. 19ಕ್ಕೆ ಅರ್ಜಿ ವಿಚಾರಣೆ.

2020 ಮಾರ್ಚ್‌ 19: ಅರ್ಜಿ ವಿಚಾರಣೆ ಸಂದರ್ಭತನ್ನ ಗಂಡ ಮುಗ್ಧ. ತನ್ನನ್ನು ಸೇರಿಸಿ ಮಗನನ್ನು ಗಲ್ಲಿಗೇರಿಸುವಂತೆ ಅಕ್ಷಯ್ ಠಾಕೂರ್ ಪತ್ನಿಯಿಂದ ಪಟಿಯಾಲ ಕೌಟುಂಬಿ‌ಕ ನ್ಯಾಯಾಲಯ ಆವರಣದಲ್ಲಿ ಕಿರುಚಾಟ.

2020 ಮಾರ್ಚ್‌ 19: ಗಲ್ಲು ಶಿಕ್ಷೆಯಿಂದ ಪಾರಾಗಲು ಅಪರಾಧಿಗಳಿಂದ ಸರಣಿ ಪ್ರಯತ್ನ.ಪವನ್‌ ಗುಪ್ತಾ ನ್ಯಾಯ ಪರಿಹಾರಾತ್ಮಕ ಅರ್ಜಿ ಸಲ್ಲಿಸಿದರೆ, ರಾಷ್ಟ್ರಪತಿ ಅವರಿಂದ ದಯಾ ಅರ್ಜಿ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿದಂತೆಅಕ್ಷಯ್‌ ಕುಮಾರ್‌ನಿಂದಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ. ಈ ಮಧ್ಯೆ ದೆಹಲಿಯ ಪಟಿಯಾಲ ಕೋರ್ಟ್‌ನಿಂದ ಗಲ್ಲು ಶಿಕ್ಷೆಗೆ ತಡೆ ನೀಡಲು ನಿರಾಕರಣೆ.

2020 ಮಾರ್ಚ್ 19:ಮುಕೇಶ್‌ ಸಿಂಗ್‌ ಹಾಗೂ ಪವನ್‌ ಗುಪ್ತಾ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್. ‘ತಾವು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಬಾಕಿ ಇದೆ’ ಎಂಬ ಕಾರಣವೊಡ್ಡಿ, ಅಪರಾಧಿಗಳಾದ ವಿನಯ್, ಪವನ್‌ ಹಾಗೂ ಅಕ್ಷಯ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದವಿಚಾರಣಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಧರ್ಮೇಂದ್ರ ರಾಣಾ.ಶಿಕ್ಷೆಗೆ ಗುರಿಯಾಗಿರುವ ಅತ್ಯಾಚಾರಿಗಳು ದೇಶ ಸೇವೆಗೆ ಸಿದ್ಧ. ಅವರಿಗೆ ಗಲ್ಲು ಶಿಕ್ಷೆ ನೀಡಬಾರದು ಎಂದು ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್‌ ಘೋಷಣೆ.

2020 ಮಾರ್ಚ್ 19:ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ನೇಣಿನ ಕುಣಿಕೆ ಬಿಗಿಯಲು ಸಜ್ಜಾದ ದೆಹಲಿಯ ತಿಹಾರ್ ಜೈಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT