ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ವಶದಲ್ಲಿ ಪೈಲಟ್‌: ’ಒಪ್ಪಂದ ಅವಕಾಶವಿಲ್ಲ, ತಕ್ಷಣ ಬಿಡುಗಡೆ ಮಾಡಿ’–ಭಾರತ

Last Updated 28 ಫೆಬ್ರುವರಿ 2019, 11:06 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ವಾಯು ಪಡೆ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಪಾಕಿಸ್ತಾನಸುರಕ್ಷಿತವಾಗಿ ಬಿಡುಗಡೆಮಾಡುವ ನಿಟ್ಟಿನಲ್ಲಿ ಅವರೊಂದಿಗೆ ಯಾವುದೇ ಒಪ್ಪಂದ ಸಾಧ್ಯತೆಗಳನ್ನು ಭಾರತ ತಳ್ಳಿ ಹಾಕಿದ್ದು, ‘ಬೇಷರತ್‌ ಅವರನ್ನು ಕೂಡಲೇ ಸ್ವದೇಶಕ್ಕೆ ಕಳುಹಿಸಿಕೊಡಬೇಕು’ ಎಂದು ಭಾರತ ಸರ್ಕಾರ ನಿಲುವು ತಳಿದಿರುವುದಾಗಿ ತಿಳಿದು ಬಂದಿದೆ.

‘ಕಾರ್ಯಾಚರಣೆ ಮುಂದುವರಿಯುವುದು ನಿಲ್ಲುವುದಾದರೆ ಭಾರತದ ಪೈಲಟ್‌ನನ್ನು ಒಪ್ಪಿಸಲು ನಾವು ಸಿದ್ಧರಿದ್ದೇವೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಹೇಳಿದ್ದಾರೆ.

ಪಾಕಿಸ್ತಾನ ವಶಕ್ಕೆ ಪಡೆದಿರುವ ಭಾರತದ ವಾಯು ಪಡೆ ಪೈಲಟ್‌ ಬಿಡುಗಡೆ ವಿಚಾರದಲ್ಲಿ ‘ಇನ್ನಾವುದೇ ಒಪ್ಪಂದದ ಪ್ರಶ್ನೆಯೇ ಎದುರಾಗುವುದಿಲ್ಲ’ ಎಂದಿರುವ ಭಾರತದ ಸರ್ಕಾರ, ತಕ್ಷಣ ಬಿಡುಗಡೆಗೆ ತಾಕೀತು ಮಾಡಿದೆ ಎನ್ನಲಾಗಿದೆ.

‘ಈ ವಿಚಾರವನ್ನು ಮುಂದಿಟ್ಟು ಪಾಕಿಸ್ತಾನ ಸಮಾಲೋಚನೆ ನಡೆಸಬಹುದು ಎಂದು ಯೋಚಿಸಿದ್ದರೆ, ಖಂಡಿತ ಅವರಿಗೆ ಅವಕಾಶವಿಲ್ಲ’ ಎಂದಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ. ಪೈಲಟ್‌ ಅಭಿನಂದನ್‌ ಅವರನ್ನು ದೇಶಕ್ಕೆ ಕರೆತರಲು ಭಾರತ ಸಕಲ ರೀತಿಯಲ್ಲೂ ಪ್ರಯತ್ನಿಸುತ್ತಿರುವುದಾಗಿ ತಿಳಿದಿದೆ.

ಭಾರತ ಮತ್ತು ಪಾಕಿಸ್ತಾನ ಯುದ್ಧ ವಿಮಾನಗಳ ನಡುವೆ ಬುಧವಾರ ನಡೆದ ಕಾದಾಟದಲ್ಲಿ ಮಿಗ್‌ ಯುದ್ಧ ವಿಮಾನ ಪತನಗೊಂಡು ಭಾರತದ ಪೈಲಟ್‌ ಅಭಿನಂದನ್‌ ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿದೆ. ಪಾಕಿಸ್ತಾನದಲ್ಲಿರುವ ಭಾರತದ ರಾಜಭಾರಿಯನ್ನು ಕರೆಸಿಕೊಂಡಿದ್ದ ಭಾರತ ಸರ್ಕಾರ, ಸುರಕ್ಷಿತ ಹಾಗೂ ಶೀಘ್ರವಾಗಿ ಪೈಲಟ್‌ ಬಿಡುಗಡೆಗೆ ರಾಜತಾಂತ್ರಿಕ ಒತ್ತಾಯವನ್ನು ಸೂಚಿಸಿದೆ. ಪೈಲಟ್‌ನ್ನು ಪಾಕಿಸ್ತಾನ ಸೂಕ್ತ ರೀತಿಯಲ್ಲಿ ನಡೆಸಿಕೊಂಡಿರದ ಬಗ್ಗೆ, ಕೆಟ್ಟದಾಗಿ ತೋರಿರುವ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ’ಅವರಿಗೆ ಯಾವುದೇ ತೊಂದರೆ ಸಂಭವಿಸದಂತೆ ಎಚ್ಚರ ವಹಿಸಲು’ ಭಾರತ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT