ಸೋಮವಾರ, ಆಗಸ್ಟ್ 19, 2019
21 °C

ಅಯೋಧ್ಯೆ ವಿಚಾರಣೆ ನೇರ ಪ್ರಸಾರಕ್ಕೆ ಅವಕಾಶ ಇಲ್ಲ: ಸುಪ್ರೀಂಕೋರ್ಟ್‌

Published:
Updated:

ನವದೆಹಲಿ: ರಾಮ ಜನ್ಮಭೂಮಿ–ಬಾಬ್ರಿ ಮಸೀದಿ ಭೂವಿವಾದ ಪ್ರಕರಣದ ವಿಚಾರಣೆಯ ನೇರ ಪ್ರಸಾರ ಅಥವಾ ಧ್ವನಿ ಮುದ್ರಣಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ಪ್ರಕರಣದ ಪ್ರತಿದಿನದ ವಿಚಾರಣೆ ಇಂದಿನಿಂದ ಆರಂಭವಾಗಿದೆ.

ಇದನ್ನೂ ಓದಿ: ಅಯೋಧ್ಯೆ ಪ್ರಕರಣ ಇತ್ಯರ್ಥಕ್ಕೆ ಸಂಧಾನ ಸಮಿತಿ ವಿಫಲ, 6ರಿಂದ ನಿತ್ಯ ವಿಚಾರಣೆ

ಮುಖ್ಯ ನ್ಯಾಯಮೂರ್ತಿ ರಂಜನ್‌ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರಿರುವ ನ್ಯಾಯಪೀಠವು ವಿಚಾರಣೆ ಆರಂಭವಾದ ತಕ್ಷಣ ನೇರ ಪ್ರಸಾರ ಕುರಿತು ಆದೇಶ ನೀಡಿತು.

ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವ ಪ್ರಯತ್ನ ಫಲ ನೀಡದ ಹಿನ್ನೆಲೆಯಲ್ಲಿ ಪ್ರತಿದಿನ ವಿಚಾರಣೆ ನಡೆಸಲು ಆಗಸ್ಟ್‌ 2ರಂದು ಕೋರ್ಟ್‌ ಆದೇಶಿಸಿತ್ತು.

ಇದನ್ನೂ ಓದಿ: ಅಯೋಧ್ಯೆ ತೀರ್ಪು, ಇಸ್ಲಾಂಗೆ ಮಸೀದಿ ಹಂಗಿಲ್ಲ

Post Comments (+)