ಗುರುವಾರ , ಜುಲೈ 16, 2020
24 °C
ರಾಷ್ಟ್ರಪತಿಗಳಿಂದಲೂ ಖಂಡನೆ

‘ಇಂತಹ ಕ್ರೌರ್ಯಕ್ಕೆ ಆಸ್ಪದವಿಲ್ಲ’: ಶ್ರೀಲಂಕಾ ದಾಳಿ ಖಂಡಿಸಿದ ಪ್ರಧಾನಿ ಮೋದಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಸ್ಫೋಟಗಳನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.

ಲೋಕಸಭಾ ಚುನಾವಣೆ ಪ್ರಚಾರದಲ್ಲಿರುವ ಅವರು ಮಧ್ಯಾಹ್ನ ಟ್ವೀಟ್ ಮಾಡಿ, ‘ಶ್ರೀಲಂಕಾದಲ್ಲಿ ಸಂಭವಿಸಿದ ಭೀಕರ ಸ್ಫೋಟಗಳನ್ನು ಖಂಡಿಸುತ್ತೇನೆ. ಇಂತಹ ಕ್ರೌರ್ಯಕ್ಕೆ ನಮ್ಮ ಪ್ರದೇಶದಲ್ಲಿ ಆಸ್ಪದವಿಲ್ಲ. ಶ್ರೀಲಂಕಾದ ಜನತೆ ಜತೆ ಭಾರತವಿದೆ. ಘಟನೆಗೆ ನನ್ನ ಸಂತಾಪಗಳು. ಗಾಯಾಳುಗಳ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ’ ಎಂದು ಬರೆದಿದ್ದಾರೆ.

‘ಶ್ರೀಲಂಕಾದಲ್ಲಿ ನಡೆದ ಉಗ್ರ ದಾಳಿಯನ್ನು ಭಾರತ ಖಂಡಿಸುತ್ತದೆ. ಮುಗ್ಧ ಜನರನ್ನು ಗುರಿಯಾಗಿಸಿ ನಡೆಸುವ ಇಂತಹ ಪ್ರಜ್ಞಾಶೂನ್ಯ ಹಿಂಸಾಚಾರಕ್ಕೆ ನಾಗರಿಕ ಸಮಾಜದಲ್ಲಿ ಜಾಗವಿಲ್ಲ. ಶ್ರೀಲಂಕಾದ ಜತೆ ನಾವಿದ್ದೇವೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಭಾನುವಾರ ಬೆಳಿಗ್ಗೆ ಶ್ರೀಲಂಕಾದ ಮೂರು ಚರ್ಚ್, ಎರಡು ಐಷಾರಾಮಿ ಹೋಟೆಲ್‌ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಭವಿಸಿದ ಬಾಂಬ್ ಸ್ಫೋಟಗಳಲ್ಲಿ 156 ಮಂದಿ ಮೃತಪಟ್ಟಿದ್ದು, ಸುಮಾರು 400 ಜನ ಗಾಯಗೊಂಡಿದ್ದಾರೆ. ಮೃತರ ಪೈಕಿ 35 ಜನ ಹೊರ ರಾಷ್ಟ್ರದವರು ಎನ್ನಲಾಗಿದೆ.

ಇನ್ನಷ್ಟು...

ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ: 156 ಸಾವು, 35 ಮಂದಿ ಹೊರ ರಾಷ್ಟ್ರದವರು

ಶ್ರೀಲಂಕಾದಲ್ಲಿ ಮತ್ತೊಂದು ಬಾಂಬ್ ಸ್ಫೋಟ: 2 ಸಾವು​

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು