ಶನಿವಾರ, ಮೇ 30, 2020
27 °C

ಗುಜರಾತ್‌ನಲ್ಲಿ 4ನೇ ಬಲಿ ಪಡೆದ ಕೋವಿಡ್‌–19

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್‌–19 ಸೋಂಕಿತ 46ನ ವರ್ಷ ವಯಸ್ಸಿನ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಗುಜರಾತ್‌ನಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೆ ಏರಿದೆ.

ಅಸ್ಟೋಡಿಯಾ ನಿವಾಸಿಯಾದ ಮೃತ ಮಹಿಳೆಯನ್ನು ಮಾರ್ಚ್‌ 26 ರಂದು ಇಲ್ಲಿನ ಎಸ್‌ವಿಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕಿತ ಮಹಿಳೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದಲೂ ಬಳಲುತ್ತಿದ್ದರು ಎಂದು ಆಸ್ಪತ್ರೆ ಪ್ರಕಟಣೆ ಹೊರಡಿಸಿದೆ.

ಅಹಮದಾಬಾದ್‌ನಲ್ಲಿ ವೈರಸ್‌ ಸೋಂಕಿನಿಂದಾಗಿ ಸಾವು ಸಂಭವಿಸಿದ ಎರಡನೇ ಪ್ರಕರಣ ಇದಾಗಿದೆ. ಇದೇ ವಾರ 85 ವರ್ಷದ ವೃದ್ಧೆ ಮೃತಪಟ್ಟಿದ್ದರು.

ದೇಶದಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 900 ದಾಟಿದ್ದು, 21 ಜನರು ಪ್ರಾಣ ಬಿಟ್ಟಿದ್ದಾರೆ. ಜಗತ್ತಿನಾದ್ಯಂತ ಸುಮಾರು 6 ಲಕ್ಷ ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಉಳಿದೆರ ಸಾವು ಸೂರತ್‌ನಲ್ಲಿ ಸಂಭವಿಸಿದ್ದವು. ಭವನಗರ್‌ನ 70 ವರ್ಷ ವ್ಯಕ್ತಿ ಸೂರತ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅದಕ್ಕೂ ಮೊದಲು 69 ವರ್ಷದ ವ್ಯಕ್ತಿಯೊಬ್ಬರು ಜೀವ ಕಳೆದುಕೊಂಡಿದ್ದರು.

ರಾಜ್ಯದಲ್ಲಿ ಇದುವರೆಗೆ ಒಟ್ಟು 1019 ಜನರನ್ನು ಪರೀಕ್ಷಿಸಲಾಗಿದ್ದು, 53 ಜನರಲ್ಲಿ ಸೋಂಕು ಇರುವುದು ದೃಢ ಪಟ್ಟಿದೆ.

ಸರ್ಕಾರದ ಮಾಹಿತಿ ಪ್ರಕಾರ ಸದ್ಯ ದೃಢ ಪಟ್ಟಿರುವ 53 ಸೋಂಕಿತರಲ್ಲಿ 27 ಜನರು ವಿದೇಶದಿಂದ ಬಂದವರಾಗಿದ್ದಾರೆ. 23 ಜನರಿಗೆ ರಾಜ್ಯದಲ್ಲೇ ಸೋಂಕು ತಗುಲಿದೆ. ಉಳಿದ ಮೂವರು ಅಂತರರಾಜ್ಯ ಪ್ರಯಾಣ ಮಾಡಿದವರಾಗಿದ್ದಾರೆ.

ದೇಶದಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 900 ದಾಟಿದ್ದು, 21 ಜನರು ಪ್ರಾಣ ಬಿಟ್ಟಿದ್ದಾರೆ. ಜಗತ್ತಿನಾದ್ಯಂತ ಸುಮಾರು 6 ಲಕ್ಷ ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು