ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತ ರೋಡ್‌ ಶೋ ವೇಳೆ ಹಿಂಸಾಚಾರ: ದೀದಿ ವಿರುದ್ಧ ಅಮಿತ್‌ ಷಾ ಗುಡುಗು

ಫೋಟೊ ಸಾಕ್ಷ್ಯ
Last Updated 15 ಮೇ 2019, 9:31 IST
ಅಕ್ಷರ ಗಾತ್ರ

ನವದೆಹಲಿ: ಕೋಲ್ಕತ್ತದಲ್ಲಿ ರೋಡ್‌ ಶೋ ನಡೆಯುತ್ತಿದ್ದ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಹಿಂಸಾಚಾರ ಸೃಷ್ಟಿಸಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಬುಧವಾರ ಆರೋಪಿಸಿದ್ದಾರೆ.

ಟಿಎಂಸಿ ಹಿಂಸಾಚಾರ ನಡೆಸಿರುವುದಕ್ಕೆ ಫೋಟೊ ಸಾಕ್ಷ್ಯಗಳನ್ನು ಮಾಧ್ಯಮ ಗೋಷ್ಠಿಯಲ್ಲಿಅಮಿತ್‌ ಶಾ ನೀಡಿದ್ದಾರೆ. ಈಶ್ವರಚಂದ್ರ ವಿದ್ಯಾಸಾಗರ್‌ ಅವರ ಪ್ರತಿಮೆಗೆ ಟಿಎಂಸಿ ಕಾರ್ಯಕರ್ತರು ಹಾನಿ ಮಾಡಿದ್ದಾರೆ ಎಂದು ಫೋಟೊಸಹಿತ ಆರೋಪ ಮಾಡಿದ್ದಾರೆ.

'ಪಶ್ಚಿಮ ಬಂಗಾಳ ಸರ್ಕಾರ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಈಗ ತಾನೆ ತಿಳಿದುಬಂದಿದೆ. ನಾನು ಎಫ್‌ಐಆರ್‌ಗಳಿಗೆ ಹೆದರುವುದಿಲ್ಲ ಎಂದು ಅವರಿಗೆ ತಿಳಿಸಲು ಬಯಸುತ್ತೇನೆ. ಹಿಂಸಾಚಾರದಲ್ಲಿ ನನ್ನ ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ’ ಎಂದು ಹೇಳಿದ್ದಾರೆ.

'ಬೆಂಗಾಲಿಗಳ ಆಕ್ರೋಶವುಮಮತಾ ದೀದಿ ಸೋಲಾಗಿ ಪರಿವರ್ತನೆಗೊಳ್ಳಲಿದೆ. ಮಮತಾ ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸುತ್ತಿದ್ದಾರೆ’ ಎಂದಿದ್ದಾರೆ.

‘ಕಾಲೇಜಿನ ಗೇಟುಗಳು ಮುಚ್ಚಿದ್ದವು, ಕೊಠಡಿಗಳು ಬಂದ್‌ ಆಗಿದ್ದವು...ಯಾರು ಬೀಗ ತೆರೆದರು, ಬಿಜೆಪಿ ಕಾರ್ಯಕರ್ತರು ಯಾರೂ ಕಾಲೇಜಿನೊಳಗೆ ಪ್ರವೇಶಿಸಲಿಲ್ಲ. ಸಿಆರ್‌ಪಿಎಫ್‌ ಇಲ್ಲದಿದ್ದರೆ ನಾನು ಅಲ್ಲಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ನಾನು ಅದೃಷ್ಟ ಮಾಡಿದ್ದೆ’ ಎಂದು ಮಂಗಳವಾರ ರೋಡ್‌ ಶೋ ವೇಳೆ ನಡೆದ ಹಿಂಸಾಚಾರವನ್ನು ನೆನಪಿಸಿಕೊಂಡಿದ್ದಾರೆ.

1872ರಲ್ಲಿ ಸ್ಥಾಪನೆಯಾಗಿರುವ ವಿದ್ಯಾಸಾಗರ ಕಾಲೇಜಿನಲ್ಲಿರುವ ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ್‌ ಅವರ ಪ್ರತಿಮೆಗೆ ಹಾನಿಯಾಗಿರುವುದರ ಬಗ್ಗೆ ಬಿಜೆಪಿ ಹಾಗೂ ಟಿಎಂಸಿ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ.

(ಕೋಲ್ಕತ್ತದಲ್ಲಿ ಸಿಪಿಎಂಪ್ರತಿಭಟನೆ)

ದಾಳಿಯ ಮೂಲಕ ಸ್ಥಳೀಯ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಬಿಜೆಪಿ ವಿರುದ್ಧ ಟಿಎಂಸಿ ಆರೋಪಿಸಿದರೆ, ಅಮಿತ್‌ ಶಾ ಅವರ ರೋಡ್‌ ಶೋದಲ್ಲಿ ಟಿಎಂಸಿ ಕಾರ್ಯಕರ್ತರೇ ಮೊದಲಿಗೆ ಕಲ್ಲು ತೂರಾಟ ನಡೆಸಿದ್ದು ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ.

(ದೆಹಲಿಯಲ್ಲಿ ಬಿಜೆಪಿ ಪ್ರತಿಭಟನೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT