ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮ್ ಆ್ಯಪ್ ಮಾಹಿತಿ ಸೋರಿಕೆಯಾಗಿಲ್ಲ: ಸರ್ಕಾರ ಸ್ಪಷ್ಟನೆ

Last Updated 2 ಜೂನ್ 2020, 16:47 IST
ಅಕ್ಷರ ಗಾತ್ರ

ನವದೆಹಲಿ: ಲಕ್ಷಾಂತರ ಭೀಮ್ ಆ್ಯಪ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂಬ ವರದಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ. ಮಾಹಿತಿ ಸೋರಿಕೆಗೆ ಸಂಬಂಧಿಸಿದ ವದಂತಿಗಳಿಗೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹೇಳಿದೆ.

ಸುಮಾರು 76 ಲಕ್ಷ ಬಳಕೆದಾರರ ಮಾಹಿತಿ ಒಳಗೊಂಡ 409 ಗಿಗಾಬೈಟ್‌ ದತ್ತಾಂಶ ಸೋರಿಕೆಯಾಗಿದೆ ಎಂದು ಕೆಲ ದಿನಗಳ ಹಿಂದೆ ವಿಪಿಎನ್‌ಮೆಂಟರ್ ವರದಿ ಉಲ್ಲೇಖಿಸಿತ್ತು. ಆಧಾರ್, ನಿವಾಸದ ವಿಳಾಸ, ಬ್ಯಾಂಕ್‌ ದಾಖಲೆಗಳು ಸೇರಿದಂತೆ ಬಳಕೆದಾರರ ಸಂಪೂರ್ಣ ಮಾಹಿತಿ ಸೋರಿಕೆಯಾಗಿದೆ ಎಂದು ವರದಿ ಹೇಳಿತ್ತು.

‘ಭೀಮ್ ಆ್ಯಪ್ ಬಳಸುವಂತೆ ಮಾಡುವ ಅಭಿಯಾನದಲ್ಲಿ ಸಿಎಸ್‌ಸಿ ಇ–ಗವರ್ನೆನ್ಸ್‌ ಸರ್ವೀಸಸ್ ಅಭಿವೃದ್ಧಿಪಡಿಸಿದ http://cscbhim.in/ ವೆಬ್‌ಸೈಟ್‌ ಅನ್ನು ಬಳಸಲಾಗುತ್ತದೆ. ಎಲ್ಲ ದತ್ತಾಂಶಗಳನ್ನು ತಪ್ಪಾಗಿ ಕಾನ್ಫಿಗರ್ ಮಾಡಲಾದ ‘ಅಮೆಜಾನ್ ವೆಬ್‌ ಸರ್ವೀಸಸ್ ಎಸ್ 3’ಯಲ್ಲಿ ಸಂಗ್ರಹಿಸಿಡಲಾಗಿದ್ದು, ಸಾರ್ವಜನಿಕವಾಗಿ ಲಭ್ಯವಿದೆ’ ಎಂದು ವಿಪಿಎನ್‌ಮೆಂಟರ್ ವರದಿ ಪ್ರತಿಪಾದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT