ಬುಧವಾರ, ಫೆಬ್ರವರಿ 26, 2020
19 °C

ದೆಹಲಿ ವಿಧಾನಸಭಾ ಚುನಾವಣೆ: ಶತಾಯುಷಿಯಿಂದ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶತಾಯುಷಿ ಮಹಿಳೆ ಕಾಳಿತಾರಾ ಮಂಡಲ್‌ (111) ಎಂಬುವರು ಶನಿವಾರ ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಚಿತ್ತರಂಜನ್‌ ಪಾರ್ಕ್‌ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.   

ದೆಹಲಿಯಲ್ಲಿ 132 ಶತಾಯುಷಿಗಳಿದ್ದು, ಇವರಲ್ಲಿ ಮಂಡಲ್‌ ಅವರೇ ಹಿರಿಯರು. ಇದುವರೆಗೂ ನಡೆದ ಎಲ್ಲ ಚುನಾವಣೆಗಳಲ್ಲೂ ಅವರು ಮತ ಚಲಾಯಿಸಿದ್ದಾರೆ. 1908ರಲ್ಲಿ ಈಗಿನ ಬಾಂಗ್ಲಾದೇಶದ (ಅವಿಭಜಿತ ಭಾರತ) ಬರಿಸಾಲ್‌ನಲ್ಲಿ ಜನಿಸಿದ ಅವರು, ಭಾರತ ವಿಭಜನೆಯ ನಂತರ ದೆಹಲಿಗೆ ವಲಸೆ ಬಂದಿದ್ದಾರೆ. 

‘ಇದುವರೆಗೂ ಎಷ್ಟು ಚುನಾವಣೆಗಳಿಗೆ ಮತ ಚಲಾಯಿಸಿದ್ದೇನೆ ಎಂಬುದು ನೆನಪಿಲ್ಲ. ಜವಾಬ್ದಾರಿಯುತ ನಾಗರಿಕರಾದ ಎಲ್ಲರೂ ಮತ ಚಲಾಯಿಸಬೇಕು’ ಎಂದು ಪ್ರತಿಕ್ರಿಯಿದ್ದಾರೆ. ಮತ ಚಲಾಯಿಸಿದ ನಂತರ ‘ಶಾಹಿ’ ಗುರುತು ತೋರಿಸಿ ನಗೆ ಬೀರಿದ್ದಾರೆ. 

80 ವರ್ಷಕ್ಕಿಂತ ಮೇಲ್ಪಟ್ಟವರನ್ನು ಮತಗಟ್ಟೆಗಳಿಗೆ ಕರೆತರಲು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು ಎಂದು ಚುನಾವಣಾಧಿಕಾರಿ ಹರೀಶ್ ಕುಮಾರ್‌ ಹೇಳಿದ್ದಾರೆ. 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು