ಲಾರಿ ಅಪಘಾತ: ಗಾಯಾಳುವನ್ನು ಕಡೆಗಣಿಸಿ ಈರುಳ್ಳಿ ಬಾಚಿಕೊಳ್ಳಲು ಮುಗಿಬಿದ್ದ ಜನ

7

ಲಾರಿ ಅಪಘಾತ: ಗಾಯಾಳುವನ್ನು ಕಡೆಗಣಿಸಿ ಈರುಳ್ಳಿ ಬಾಚಿಕೊಳ್ಳಲು ಮುಗಿಬಿದ್ದ ಜನ

Published:
Updated:

ಮುಂಬೈ: ಲೊನಾವಲಾದ  ಮುಂಬೈ -ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಗುರುವಾರ ಬೆಳಗ್ಗೆ ಈರುಳ್ಳಿ ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ವಲ್ವಾನ್ ಸೇತುವೆಯಿಂದ 40 ಅಡಿ ಕೆಳಗೆ ಬಿದ್ದು ಸಂಭವಿಸಿದ ಅಪಘಾತದಲ್ಲಿ ಲಾರಿ ಚಾಲಕ ತೀವ್ರ ಗಾಯಗೊಂಡಿದ್ದಾರೆ.

ಆ ಹೊತ್ತಿಗೆ ಘಟನಾ ಸ್ಥಳಕ್ಕೆ ಧಾವಿಸಿದ ಜನರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಾಲಕನಿಗೆ ಸಹಾಯ ಮಾಡುವ ಬದಲು ಈರುಳ್ಳಿ ಬಾಚಿಕೊಳ್ಳಲು ಮುಗಿಬಿದ್ದಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ ಚಾಲಕನನ್ನು ರಕ್ಷಿಸುವ ಬದಲು ಅಲ್ಲಿದ್ದ ಜನರು ಚೀಲಗಳನ್ನು ತಂದು ಈರುಳ್ಳಿ ಬಾಚಿಕೊಂಡು ಹೋಗುವುದರಲ್ಲಿ ಮಗ್ನರಾಗಿದ್ದರು.

ಗಾಯಗೊಂಡ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುವಿಗೆ ಸಹಾಯ ಮಾಡದೆ ಈರುಳ್ಳಿ ಬಾಚಿಕೊಂಡು ಹೋಗಿದ್ದ ಜನರ ವಿರುದ್ಧ ಲೊನವಲಾ ಪೊಲೀಸರು ಕೇಸು ದಾಖಲಿಸಿದ್ದಾರೆ ಎಂದು ಸುದ್ದಿಮೂಲಗಳು ಹೇಳಿವೆ.
ನಿಯಂತ್ರಣ ತಪ್ಪಿದ ಲಾರಿ ಸೇತುವೆಯಿಂದ ಕೆಳಗೆ ಬಿದ್ದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 7

  Angry

Comments:

0 comments

Write the first review for this !