ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹೀನ್‌ಬಾಗ್‌ ಜನರಿಗೆ ಕೇಜ್ರಿವಾಲ್ ಬಿರಿಯಾನಿ ತಿನಿಸುತ್ತಿದ್ದಾರೆ: ಆದಿತ್ಯನಾಥ

Last Updated 4 ಫೆಬ್ರುವರಿ 2020, 6:47 IST
ಅಕ್ಷರ ಗಾತ್ರ

ನವದೆಹಲಿ:ಅರವಿಂದ ಕೇಜ್ರಿವಾಲ್‌ ಪಾಕಿಸ್ತಾನದೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ. ಕೇಜ್ರಿವಾಲ್‌ ಗೆದ್ದರೆ ಪಾಕಿಸ್ತಾನಕ್ಕೆ ಖುಷಿಯಾಗುತ್ತದೆ. ಹಾಗಾಗಿ ಅವರಿಗೆ ಮತನೀಡಬೇಡಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ದೆಹಲಿ ಮತದಾರರಿಗೆ ಮನವಿ ಮಾಡಿದ್ದಾರೆ.

ಶಾಹೀನ್‌ಬಾಗ್‌ನಲ್ಲಿ ಸಿಎಎ ವಿರುದ್ಧ ಪ್ರತಿಭಟಿಸುತ್ತಿರುವವರ ವಿರುದ್ಧ ಕಿಡಿಕಾರಿದ ಆದಿತ್ಯನಾಥ, 370ನೇ ವಿಧಿ ರದ್ದು ಮಾಡಿದ ಸಿಟ್ಟಿನಿಂದ ಈ ಜನರು ಸಿಎಎ ವಿರುದ್ದ ಪ್ರತಿಭಟಿಸುತ್ತಿದ್ದಾರೆ.370 ನೇ ವಿಧಿ ಬಗ್ಗೆ ಅವರ ಸಹಭಾಗಿತ್ವವನ್ನು ನೀವು ನೋಡಿರಬಹುದು. 370ನೇ ವಿಧಿ ಬಗ್ಗೆ ಇಮ್ರಾನ್ ಖಾನ್‌ನಂತೆಯೇ ಕೇಜ್ರಿವಾಲ್ ಮಾತನಾಡುತ್ತಾರೆ. ನೀವದನ್ನು ಕೇಳಿರಬಹುದು.

ಇದೀಗ ದೆಹಲಿ ಚುನಾವಣಾ ಸಮಯ. ಅರವಿಂದ ಕೇಜ್ರಿವಾಲ್ ಪರ ಮಾತನಾಡುತ್ತಿರುವವರುಯಾರು? ಪಾಕಿಸ್ತಾನದ ಸಚಿವರು. ಶಾಹೀನ್‌ಬಾಗ್ ಪ್ರತಿಭಟನಕಾರರಿಗೆ ಕೇಜ್ರಿವಾಲ್ ಬಿರಿಯಾನಿ ತಿನಿಸುತ್ತಿದ್ದಾರೆ ಎಂದು ಅವರಿಗೆ ಗೊತ್ತಿದೆ . ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಿ ಎಂದು ಪಾಕ್ ಸಚಿವ ಫವಾದ್ ಚೌಧರಿ ಟ್ವೀಟ್ ಉಲ್ಲೇಖಿಸಿ ಆದಿತ್ಯನಾಥ ಈ ರೀತಿ ವಾಗ್ದಾಳಿ ಮಾಡಿದ್ದಾರೆ.

ಸೋಮವಾರ ದೆಹಲಿಯಲ್ಲಿ ಚುನಾವಣಾ ಪ್ರಚಾರ ಮಾಡಿದ ಆದಿತ್ಯನಾಥ,ಭಾರತೀಯರು ಯಾರಿಗೆ ಮತ ನೀಡಬೇಕು ಎಂಬುದನ್ನು ಪಾಕ್ ನಿರ್ಧರಿಸಬೇಕೇ? ಕೇಜ್ರಿವಾಲ್‌ಗೆ ಮತ ನೀಡುವುದು ಪಾಕ್‌ಗೆ ಖುಷಿ ಕೊಡುತ್ತದೆ ಎಂದಾದರೆ ಹಾಗೆ ಮಾಡಬೇಡಿ.ಕೇಜ್ರಿವಾಲ್ ಅವರು ಸಮಾಜ ವಿರೋಧಿ ಮತ್ತು ದೇಶ ವಿರೋಧಿಗಳ ಕೈಗೊಂಬೆಯಾಗಿದ್ದಾರೆ ಎಂದು ಆದಿತ್ಯನಾಥ ಆರೋಪಿಸಿದ್ದಾರೆ.

ಪಶ್ಚಿಮ ದೆಹಲಿಯ ವಿಕಾಸ್‌ಪುರಿಯಲ್ಲಿ ಪ್ರಚಾರ ಭಾಷಣ ಮಾಡಿದ ಆದಿತ್ಯನಾಥ, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಗ್ಗೆ ಕೇಜ್ರಿವಾಲ್ ಚಿಂತಿಸಿಲ್ಲ. ಅವರಿಗೆ ಶಾಹೀನ್‌ಬಾಗ್‌ನಲ್ಲಿ ಸಿಎಎ ವಿರುದ್ಧ ಪ್ರತಿಭಟಿಸುವವರ ಬಗ್ಗೆ ಮಾತ್ರ ಕಾಳಜಿ ಇದೆ ಎಂದಿದ್ದಾರೆ.

ಆನಂತರಉತ್ತಮ್ ‌ನಗರದಲ್ಲಿ ಭಾಷಣ ಮಾಡಿದ ಅವರು ಕಳೆದ ಐದು ವರ್ಷ ಕೇಜ್ರಿವಾಲ್ ದೆಹಲಿಯ ಜನರ ಭಾವನೆಗಳೊಂದಿಗೆ ಆಟವಾಡಿದ್ದಾರೆ. ದೆಹಲಿಯ ಅಭಿವೃದ್ಧಿಯನ್ನು ಅವರು ತಡೆದಿದ್ದಾರೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಅವರು ಸಮಾಜ ವಿರೋಧಿ ಮತ್ತು ದೇಶ ವಿರೋಧಿ ಶಕ್ತಿಗಳ ಕೈಗೊಂಬೆಯಾಗಿದ್ದಾರೆ. ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ದೇಶದ ರಾಜಧಾನಿಯಲ್ಲಿ ಟ್ರಾಫಿಕ್ ಸಮಸ್ಯೆಯುಂಟಾಗಿದೆ. 9.30ಕ್ಕೆ ಭೇಟಿ ಮಾಡಲು ಬಯಸಿದ್ದಅತಿಥಿಯೊಬ್ಬರು 11 ಗಂಟೆಗೆ ತಲುಪಿದರು. ಅವರು 7 ಗಂಟೆಗೆ ಮನೆಯಿಂದ ಹೊರಟಿದ್ದರು. ಆದರೆ ಶಾಹೀನ್‌ಬಾಗ್‌ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡರು ಎಂದು ಅವರೇ ನನ್ನಲ್ಲಿ ಹೇಳಿದ್ದಾರೆ. ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದವರ ಪರ ಕೇಜ್ರಿವಾಲ್ಸಹಾನುಭೂತಿ ವ್ಯಕ್ತ ಪಡಿಸುತ್ತಿದ್ದಾರೆ ಎಂದುಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT