ಗುರುವಾರ , ಡಿಸೆಂಬರ್ 12, 2019
26 °C

ಉಗ್ರರ ದಮನಕ್ಕೆ ಪಾಕ್‌ ನೆರವಿಗೆ ಸಿದ್ಧ: ರಾಜನಾಥ್ ಸಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

ಜೈಪುರ: ‘ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಪಾಕಿಸ್ತಾನವು ಭಾರತದ ನೆರವು ಪಡೆಯಲಿ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ರಾಜಸ್ಥಾನ ವಿಧಾನಸಭಾ ಚುನಾವಣೆಯ ಪ್ರಚಾರ ರ್‍ಯಾಲಿಯ ವೇಳೆ ಅವರು ಮಾತನಾಡಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಭಾರತ–ಪಾಕ್ ನಡುವೆ ಅದು ಸಮಸ್ಯೆಯೇ ಅಲ್ಲ. ಸಮಸ್ಯೆ ಭಯೋತ್ಪಾದನೆಯದ್ದು. ಅದರ ಬಗ್ಗೆಯಷ್ಟೇ ಪಾಕಿಸ್ತಾನ ಚರ್ಚಿಸಬೇಕು’ ಎಂದು ರಾಜನಾಥ್ ಹೇಳಿದ್ದಾರೆ.

‘ತಾಲಿಬಾನ್ ಉಗ್ರರ ವಿರುದ್ಧ ಹೋರಾಡಲು ಅಫ್ಗಾನಿಸ್ತಾನವು ಅಮೆರಿಕದ ನೆರವು ಪಡೆದುಕೊಂಡಿದೆ. ಉಗ್ರರನ್ನು ಸದೆಬಡಿಯಲು ಪಾಕಿಸ್ತಾನವೊಂದಕ್ಕೇ ಸಾಧ್ಯವಿಲ್ಲದಿದ್ದರೆ, ಅದು ಭಾರತದ ನೆರವು ಪಡೆದುಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು