ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶಕ್ಕೆ ನುಸುಳಿದ ಪಾಕ್ ಉಗ್ರರು, ಅಯೋಧ್ಯೆಯೇ ಗುರಿ: ಗುಪ್ತಚರ ಇಲಾಖೆ

ಅಯೋಧ್ಯೆ, ಫೈಜಾಬಾದ್, ಗೋರಖ್‌ಪುರದಲ್ಲಿ ಅಡಗಿರುವ ಶಂಕೆ
Last Updated 5 ನವೆಂಬರ್ 2019, 5:00 IST
ಅಕ್ಷರ ಗಾತ್ರ

ನವದೆಹಲಿ:ಅಯೋಧ್ಯೆ ತೀರ್ಪಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪಾಕಿಸ್ತಾನಿ ಉಗ್ರರು ಉತ್ತರ ಪ್ರದೇಶಕ್ಕೆ ನುಸುಳಿದ್ದಾರೆ ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ.

ನೇಪಾಳದ ಮೂಲಕ ಏಳು ಉಗ್ರರ ತಂಡ ಉತ್ತರ ಪ್ರದೇಶ ಪ್ರವೇಶಿಸಿದ ಸುಳಿವು ಲಭ್ಯವಾಗಿದೆ ಎಂದು ಗುಪ್ತಚರ ಇಲಾಖೆ ಮೂಲಗಳನ್ನು ಉಲ್ಲೇಖಿಸಿಇಂಡಿಯಾ ಟುಡೆವರದಿ ಮಾಡಿದೆ.

ಪ್ರಸ್ತುತ ಉಗ್ರರು ಅಯೋಧ್ಯೆ, ಫೈಜಾಬಾದ್ ಮತ್ತು ಗೋರಖ್‌ಪುರದಲ್ಲಿ ಅಡಗಿಕೊಂಡಿದ್ದಾರೆ ಎನ್ನಲಾಗಿದೆ.

ಏಳು ಉಗ್ರರ ಪೈಕಿ ಐವರನ್ನು ಮೊಹಮ್ಮದ್ ಯಾಕುಬ್, ಅಬು ಹಂಜಾ, ಮೊಹಮ್ಮದ್ ಶಾಬಾಜ್, ನಿಸಾರ್ ಅಹ್ಮದ್ ಮತ್ತು ಮೊಹಮ್ಮದ್ ಖ್ವಾಮಿ ಚೌಧರಿ ಎಂದು ಗುರುತಿಸಲಾಗಿದೆ. ಉಗ್ರರ ದಾಳಿ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಸುಳಿವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಗುಪ್ತಚರ ಮೂಲಗಳು ತಿಳಿಸಿವೆ ಎಂದು ವರದಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT