ನವದೆಹಲಿ: ಕೋವಿಡ್–19ರಿಂದ ಬಳಲುತ್ತಿದ್ದ ಆಗ್ರಾ ಜಿಲ್ಲೆಯ 97 ವರ್ಷದ ವೃದ್ಧರೊಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.ಕೋವಿಡ್ ಸೋಂಕಿತರಿಗೆ ಇದೊಂದು ಭರವಸೆಯ ಆಶಾಕಿರಣ ಎಂದು ಸ್ಥಳೀಯ ಅಧಿಕಾರಿಗಳು ಬಣ್ಣಿಸಿದ್ದಾರೆ.

1923ರಲ್ಲಿ ಜನಿಸಿದ ಈ ವ್ಯಕ್ತಿ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರನ್ನು ಏಪ್ರಿಲ್ 29 ರಂದು ಆಗ್ರಾದ ನಯತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಧಿಕ ರಕ್ತದೊತ್ತಡ ಹೊಂದಿದ್ದ ಅವರಿಗೆ ಆರಂಭದಲ್ಲಿ ಆಮ್ಲಜನಕದ ಪೂರೈಕೆಯ ಅಗತ್ಯವೂ ಇತ್ತು. ಆದರೆ ಕ್ರಮೇಣ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತು. ಇದೀಗ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಕೋವಿಡ್‌ನಿಂದ ಗುಣಮುಖರಾಗಿರುವ ಅತ್ಯಂತ ಹಿರಿಯ ವ್ಯಕ್ತಿ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ.

‘ಈ ಹಿರಿಯ ನಾಗರಿಕರಿಗೆ ಕೋವಿಡ್ ಬಂದಾಗಿನಿಂದ ನಮ್ಮ ತಂಡವು ನಿತ್ಯ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿತ್ತು. ಇತ್ತೀಚೆಗೆ ಅವರ ಪರೀಕ್ಷಾ ವರದಿ ನೆಗಿಟಿವ್ ಬಂದಿತ್ತು. ಆ ದಿನ ನಾವೆಲ್ಲ ತುಂಬ ಖುಷಿಪಟ್ಟಿದ್ದೆವು. ಕೋವಿಡ್‌ನಿಂದ ನಿತ್ಯ ಸಾವು, ನೋವುಗಳು ಉಂಟಾಗುತ್ತಿವೆ. ಇದರ ನಡುವೆಯೂ 97 ವರ್ಷದ ವೃದ್ಧರೊಬ್ಬರು ಗುಣಮುಖರಾಗಿರುವುದು ಉಳಿದ ಸೋಂಕಿತರಲ್ಲಿ ಭರವಸೆಯ ಆಶಾಕಿರಣ ಮೂಡಿಸುತ್ತದೆ’ ಎಂದು ಆಗ್ರಾ ಜಿಲ್ಲಾಧಿಕಾರಿ ಪ್ರಭು ಎನ್ ಸಿಂಗ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ವೃದ್ಧ ವ್ಯಕ್ತಿ ಗುಣಮುಖರಾದ ಕುರಿತು ಟ್ವೀಟ್ ಮಾಡಿರುವ ಅವರು, ಕೊರೊನಾ ವಾರಿಯರ್ಸ್‌ಗೆ ಸಲ್ಯೂಟ್ ಮಾಡುವ ಮೂಲಕ ವಂದನೆ ಅರ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.