ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮನ್ ಕಿ ಬಾತ್'ನಲ್ಲಿ ಬಾಲಕಿ ಕಾಮ್ಯಳನ್ನು ಹೊಗಳಿದ ಪ್ರಧಾನಿ ಮೋದಿ

Last Updated 23 ಫೆಬ್ರುವರಿ 2020, 8:38 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿಭಾರತೀಯ ಮೂಲದ ಬಾಲಕಿ ಕಾಮ್ಯ ಕಾರ್ತಿಕೇಯನ್ ಅವರನ್ನು ಹೊಗಳಿದ್ದು, 'ಮಿಷನ್ ಸಾಹಸ್' ವಿದೇಶೀ ನೆಲಕ್ಕೂ ಹಬ್ಬಿರುವುದು ತಮಗೆ ಸಂತೋಷ ಉಂಟು ಮಾಡಿದೆ ಎಂದಿದ್ದಾರೆ.

12 ವರ್ಷದ ಬಾಲಕಿ ಕಾಮ್ಯ ಅತಿಕಿರಿಯ ಪರ್ವತಾರೋಹಿಯಾಗಿದ್ದು, ದಕ್ಷಿಣ ಅಮೆರಿಕಾದ ಅರ್ಜೆಂಟೀನಾದ6962 ಮೀಟರ್ ಎತ್ತರದ ಮೌಂಟ್ ಅಕಾಂಕಗು ಪರ್ವತ ಏರಿ ದೇಶಕ್ಕೆ ಕೀರ್ತಿ ತಂದಿದ್ದಾಳೆ. ಅಲ್ಲದೆ, ಆಕೆ ಅಲ್ಲಿ ಭಾರತರಾಷ್ಟ್ರಧ್ವಜವನ್ನು ಎತ್ತರಕ್ಕೆ ಹೊಯ್ದಿದ್ದಾಳೆ ಎಂದು ಹೊಗಳಿದ್ದಾರೆ.

ನನ್ನ ಪ್ರೀತಿಯ ದೇಶವಾಸಿಗಳೇ, ನನ್ನ ದೇಶದ ಮಹಿಳಾ ಉದ್ಯಮಿಗಳು, ಸಾಹಸ ಪ್ರವೃತ್ತಿಯ ಹೆಣ್ಣು ಮಕ್ಕಳ ಬಗ್ಗೆ ನಮಗೆಲ್ಲರಿಗೂ ಅತ್ಯಂತ ಗೌರವ, ಹೆಮ್ಮೆ ಇದೆ. ಇಂತಹ ಸಾಹಸಗಳುಹಳೆಯ ದಾಖಲೆಗಳನ್ನು ಯುವ ಪೀಳಿಗೆ ಮುರಿದು ಮುಂದುವರಿಯುತ್ತಿರುವುದರ ಸಂಕೇತ ಎಂದು ಮೋದಿ ಹೇಳಿದ್ದಾರೆ.

ನಾನು ಈ ಸಂದರ್ಭದಲ್ಲಿ ಬಾಲಕಿ ಕಾಮ್ಯ ಕಾರ್ತಿಕೇಯನ್ ಅವರ ಸಾಹಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ. ದಕ್ಷಿಣ ಅಮೆರಿಕಾದ ಅತ್ಯಂತ ಎತ್ತರದ ಪರ್ವತ ಏರಿ ಇಡೀ ದೇಶಕ್ಕೆ ಕೀರ್ತಿ ತಂದಿದ್ದಾಳೆ.ಕಾಮ್ಯ ಕಾರ್ತಿಕೇಯನ್ ಅವರಿಗೆ ಈ ಮೂಲಕ ಶುಭವಾಗಲಿ ಎಂದು ಹಾರೈಸುತ್ತೇನೆ. ಕಾವ್ಯಳಸಾಹಸ ಇತರರಿಗೂ ಸ್ಪೂರ್ತಿ, ಆ ಮೂಲಕ ನಮ್ಮ ದೇಹ ಫಿಟ್ ಆಗಿರಲು ಉತ್ತೇಜಿಸಲಿದೆ. ಕಾಮ್ಯ ಕಾರ್ತಿಕೇಯನ್ ಇನ್ನೂ ಹೆಚ್ಚಿನ ಸಾಹಸಗಳನ್ನು ಮಾಡುವ ಮೂಲಕ ಇತರರಿಗೆ ಸ್ಪೂರ್ತಿಯಾಗಲಿ ಎಂದಿದ್ದಾರೆ.

ಯಾವ ದೇಶ ಆರೋಗ್ಯದಲ್ಲಿ ಉತ್ತಮ ರೀತಿಯಲ್ಲಿರುತ್ತದೋಆ ದೇಶ ಯಾವಾಗಲೂ ಯಶಸ್ವಿನತ್ತ ಹೆಜ್ಜೆ ಇಡುತ್ತದೆ. ಮುಂಬರುವ ದಿನಗಳಲ್ಲಿದೇಶದಲ್ಲಿ ಸಾಹಸ ಕ್ರೀಡೆಗಳಿಗೆ ಉತ್ತಮ ಅವಕಾಶವಿದೆ.ನಮ್ಮ ದೇಶ ಬೌಗೋಳಿಕವಾಗಿಯೂ ಸಾಹಸ
ಕ್ರೀಡೆಗಳಿಗೆ ಹೆಸರುವಾಸಿ. ಮುಂದಿನ ದಿನಗಳು ಸಾಹಸ ಕ್ರೀಡೆಗಳ ದಿನಗಳಾಗಿದ್ದು, ಇದನ್ನು ಸಾಹಸ ಪ್ರಿಯರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT