ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್‌ ಖರೀದಿ ಹಗರಣದಲ್ಲಿ ಮೊದಲು ಮೋದಿಯ ತನಿಖೆಯಾಗಲಿ: ರಾಹುಲ್ ಒತ್ತಾಯ

Last Updated 7 ಮಾರ್ಚ್ 2019, 7:12 IST
ಅಕ್ಷರ ಗಾತ್ರ

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒತ್ತಾಯಪಡಿಸಿದ್ದಾರೆ.

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ಕಳುವಾಗಿದೆ ಎಂದು ಕೇಂದ್ರಸರ್ಕಾರ ಸುಪ್ರೀಂಕೋರ್ಟ್‌ಗೆ ಹೇಳಿಕೆ ನೀಡಿದ ಬಳಿಕ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಹುಲ್, ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ಭ್ರಷ್ಟಾಚಾರ ಮತ್ತು ಬಂಡವಾಳಶಾಹಿ ಮತ್ತು ರಾಜಕಾರಣಿಗಳ ಅಪವಿತ್ರ ಮೈತ್ರಿ ಕುರಿತು ಮಾತನಾಡಿದ ರಾಹುಲ್, ನಾನು ಈ ವಿಚಾರದಲ್ಲಿಯಾರನ್ನು ದೂರುತ್ತಿಲ್ಲ. ಸರ್ಕಾರದದಾಖಲೆಗಳೇಅವರ ಬಗ್ಗೆ ಹೇಳುತ್ತಿವೆ. ಸರ್ಕಾರದ ದಾಖಲೆಗಳೇ ಮೋದಿ ಹಾಗೂ ಅವರ ಕಚೇರಿ ಇದರಲ್ಲಿ ಭಾಗಿಯಾಗಿರುವುದನ್ನುಉಲ್ಲೇಖಿಸಿದೆಎಂದರು.

ಮೋದಿ ಅವರು ಈ ವಿಚಾರದಲ್ಲಿ ಅನಿಲ್ ಅಂಬಾನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬೈಪಾಸ್ ಸರ್ಜರಿ ನಡೆಸಿದ್ದಾರೆ.ಮೋದಿ ರಫೇಲ್ ಖರೀದಿ ವಿಚಾರದಲ್ಲಿ ವಿಳಂಬ ಮಾಡಿದರು. ಇದರ ಲಾಭ ಅಂಬಾನಿಪಾಲಾಯಿತು.ಅನಿಲ್ ಅಂಬಾನಿ ಅವರಿಗೆ ಮೋದಿ30ಸಾವಿರ ಕೋಟಿ ಹಣ ನೀಡಿದರು ಎಂದು ದೂರಿದರು.

ಚೌಕೀದಾರರನನ್ನು ರಕ್ಷಣೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ತಮ್ಮನ್ನು ತಾವು ತನಿಖೆಗೆ ಒಳಪಡಿಸಿಕೊಳ್ಳಲು ಪ್ರಧಾನ ಮಂತ್ರಿಯವರು ಹೆದರುತ್ತಿದ್ದಾರೆ. ಮೋದಿ ಇದರಲ್ಲಿತಪ್ಪಿತಸ್ಥರಲ್ಲ ಎಂದರೆ, ಪ್ರಕರಣವನ್ನು ಯಾಕೆ ತನಿಖೆಗೆ ಆದೇಶಿಸುತ್ತಿಲ್ಲ. ‌

ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ತನಿಖೆಗೆ ಒಳಪಡಿಸಬೇಕು. ಆದರೆ ಮೋದಿ ಅವರ ಹೆಸರು ಬಂದ ಕೂಡಲೇತನಿಖೆ ನಡೆಯುವುದಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.

‘ನಾನು ಯಾವುದಕ್ಕೂ ಭಯಪಡುವುದಿಲ್ಲ. ಸ್ವಯಂ ತನಿಖೆಗೆ ಒಳಪಡುತ್ತೇನೆ. ನಾನು ರಾಷ್ಟ್ರದ ಚೌಕೀದಾರ. ನನ್ನನ್ನು ತನಿಖೆಗೆ ಒಳಪಡಿಸಿಎಂದು ಮೋದಿ ಯಾಕೆ ಹೇಳುತ್ತಿಲ್ಲ’ ಎಂದು ರಾಹುಲ್ ಕಿಡಿಕಾರಿದ್ದಾರೆ

‘ಎಲ್ಲವೂ ಕಣ್ಮರೆ’ಯಾಗಿದೆ (Gayab ho gaya) ಇದು ಕೇಂದ್ರ ಸರ್ಕಾರದ ಟ್ಯಾಗ್‌ಲೈನ್‌ ಆಗಿದೆ. 2 ಕೋಟಿ ಉದ್ಯೋಗಾವಕಾಶ, ರೈತರಿಗೆ ಬೆಳೆ ಪರಿಹಾರ, ಬ್ಯಾಂಕ್‌ಗಳಲ್ಲಿ 15 ಲಕ್ಷ ಹಣ ಜಮಾ ಹೀಗೆ ಕೊಟ್ಟ ಎಲ್ಲಾ ಭರವಸೆಗಳು ಕಾಣುತ್ತಿಲ್ಲ. ಇದನ್ನು ರಫೇಲ್‌ ಹಗರಣದಲ್ಲಿ ಸಾಧ್ಯವಾಗಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT