ಸೋಮವಾರ, ಮೇ 17, 2021
31 °C

ದೆಹಲಿ ಹಿಂಸಾಚಾರದ ತನಿಖೆ ಚುರುಕು: ಎರಡು ಪ್ರತ್ಯೇಕ ಕೊಲೆ ಪ್ರಕರಣ, 11 ಮಂದಿ ಬಂಧನ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ಮುಖ್ಯಪೇದೆ ಕೊಲೆ ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರ ಕೊಲೆ ಪ್ರಕರಣ ಸಂಬಂಧ 11 ಮಂದಿಯನ್ನು ಬಂಧಿಸಿದ್ದಾರೆ.

ಫೆಬ್ರವರಿ 24ರಂದು ಗೋಕುಲ್ ಪುರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ವೇಳೆಯೇ ಮುಖ್ಯಪೇದೆ ರತನ್ ಲಾಲ್‌ ಎಂಬುವರನ್ನು ಅಪರಿಚಿತರು ಗುಂಡಿಟ್ಟು ಕೊಲೆ ಮಾಡಿದ್ದರು. 

ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸಿದ ದೆಹಲಿ ಪೊಲೀಸರು ಹಲವು ಸಾಕ್ಷಿಗಳನ್ನು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆದ ದಿನವೇ ಆರೋಪಿಗಳು ಸಂಚು ರೂಪಿಸಿ ಮುಖ್ಯಪೇದೆ ರತನ್ ಲಾಲ್ ರನ್ನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಾಲ್ವರ ಬಂಧನ

ದೆಹಲಿ ಹಿಂಸಾಚಾರದ ವೇಳೆ ಕೊಲೆಯಾಗಿದ್ದ ಅಕ್ಬರಿ ಬೇಗಮ್ ಪ್ರಕರಣಕ್ಕೆ ಸಂಬಂಧ ಪೊಲೀಸರು 4 ಮಂದಿಯನ್ನು ಬಂಧಿಸಿದ್ದಾರೆ.

ಹಿಂಸಾಚಾರದ ವೇಳೆ ಅಕ್ಬರಿ ಬೇಗಂ ಅವರ ಶವ ದೆಹಲಿಯ ಚರಂಡಿಯಲ್ಲಿ ದೊರೆತಿತ್ತು. ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಹಲವರು ಸಾವನ್ನಪ್ಪಿದ್ದರು. 

ನಾಲ್ಕು ಮಂದಿಯ ಶವಗಳು ಚರಂಡಿಯಲ್ಲಿ ದೊರೆತಿದ್ದವು. ಅವುಗಳಲ್ಲಿ ಅಕ್ಬರಿ ಬೇಗಂ ಶವ ಕೂಡ ಒಂದು. ಅಕ್ಬರಿ ಅವರನ್ನು ಕೊಲೆ ಮಾಡಿದ ಆರೋಪಿಗಳು ಶವವನ್ನು ಚರಂಡಿಯಲ್ಲಿ ಹೂತುಹಾಕಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರ | 79 ಮನೆ, 327 ಗುಡಿಸಲು ನಾಶ

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು