ಬುಧವಾರ, 24 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕೇರಳದಲ್ಲಿ ಹಿರಿಯ ಮಹಿಳೆಯೊಬ್ಬರ ಮೇಲೆ ಮುಸ್ಲಿಮರಿಂದ ಹಲ್ಲೆ' ಎಂಬ ವೈರಲ್ ಸಂದೇಶ 'ಸುಳ್ಳು ಸುದ್ದಿ'!

Last Updated 27 ಏಪ್ರಿಲ್ 2018, 12:17 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳದಲ್ಲಿ ಹಿರಿಯ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆದಿದ್ದು ಮುಸ್ಲಿಮರು ದೇವಾಲಯ ಮತ್ತು  ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಬಾಲಿವುಡ್ ಯಾಕೆ ಮೌನ ವಹಿಸಿದೆ? #Asifa #islam ಎಂಬ ಹ್ಯಾಶ್‌ಟ್ಯಾಗ್‍ ಇರುವ ಸಂದೇಶವೊಂದನ್ನು ಶಂಖ್‍ನಾದ್ ಟ್ವೀಟ್ ಮಾಡಿತ್ತು. ಇದಾದ ನಂತರ ಜಿಹಾದಿಗಳಿಂದ ಹಿಂದೂಗಳ ಮೇಲೆ ಹಲ್ಲೆ, ಆಸೀಫಾ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಕೇರಳದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಂಧಲೆ ನಡೆಸಲಾಗಿದೆ ಎಂದು ಟ್ವೀಟ್ ಮಾಡಲಾಗಿತ್ತು . ಆದಾಗ್ಯೂ, ಶಂಖ್‍ನಾದ್ ಟ್ವೀಟ್ ಮಾಡಿದ ಈ ಸುದ್ದಿ ಸುಳ್ಳು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

ಶಂಖ್‍ನಾದ್ ಟ್ವೀಟ್ ಮಾಡಿದ ಇದೇ ಸುದ್ದಿ  @BhaiyyaBabu ಎಂಬ ಟ್ವಿಟರ್ ಹ್ಯಾಂಡಲ್‍ನಲ್ಲೂ ಶೇರ್ ಆಗಿತ್ತು. ಅಲ್ಲಿ ಹಿಂದಿಯಲ್ಲಿ ಬರೆದ ಟಿಪ್ಪಣಿಯೊಂದಿಗೆ #HinduDeniedEquality ಎಂಬ ಹ್ಯಾಶ್‍ಟ್ಯಾಗ್ ಇತ್ತು.

(screenshot ಕೃಪೆ: ಆಲ್ಟ್ ನ್ಯೂಸ್)

ನಿಜ ಸುದ್ದಿ ಏನು?
ಸಾಮಾಜಿಕ ತಾಣದಲ್ಲಿ ಹರಿದಾಡಿದ ಈ ಚಿತ್ರ ಬಾಂಗ್ಲಾದೇಶದ ಫೇಸ್‍ಬುಕ್ ಪೇಜ್‍ನಲ್ಲಿ ಶೇರ್ ಆಗಿತ್ತು. ಅಕ್ಟೋಬರ್ 2017ರಲ್ಲಿ ಸುಪ್ತೋದಿಶಾ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಈ ಚಿತ್ರ ಶೇರ್ ಆಗಿದ್ದು, ಬಾಂಗ್ಲಾದೇಶದ ಚಿತ್ತಗಾಂಗ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದರ ಚಿತ್ರವಾಗಿದೆ ಇದು.

ಚಿತ್ರದಲ್ಲಿರುವ ಈ ಮಹಿಳೆಯ ಹೆಸರು ಪಂಚಬಾಲಾ ಕರ್ಮಾಕರ್, ಈಕೆ ಜಲಧಿ ಗ್ರಾಮದ ನಿವಾಸಿ. ಬಡ ಹಾಗೂ ನಿಸ್ಸಹಾಯಕ ಮಹಿಳೆ ಮೇಲೆ ಆಕೆಯ ನೆರೆಮನೆಯವರಾದ ಪ್ರದೀಪ್ ಘೋಷ್ ಮತ್ತು ಆತನ ಪುತ್ರ ಬಿಸ್ವಜಿತ್ ಸಂಚು ರೂಪಿಸಿ ಹಲ್ಲೆ ಮಾಡಿದ್ದರು.ಅತಂತ್ರ ಪರಿಸ್ಥಿತಿಯಲ್ಲಿರುವ ಈಕೆಗೆ ಸಹಾಯ ಮಾಡಿ. ಆಕೆಗೆ ಸಹಾಯ ಮಾಡಲು ಮತ್ತು ಚಿಕಿತ್ಸೆ ನೀಡಲು ಯಾರೂ ಇಲ್ಲ. ದಯವಿಟ್ಟು ಈ ಸಂದೇಶವನ್ನು ಶೇರ್ ಮಾಡಿ ಎಂದು ಸುಪ್ತೋದಿಶಾ ಪೇಜ್‍ನಲ್ಲಿ ಬಂಗಾಳಿ ಭಾಷೆಯಲ್ಲಿ ಬರೆಯಲಾಗಿತ್ತು.  ಈ ಪುಟದಲ್ಲಿ ಶೇರ್ ಆಗಿರುವ ಫೋಟೊ ನೋಡಿದರೆ ಆ ಫೋಟೊದಲ್ಲಿ ಬಂಗಾಳಿಯಲ್ಲಿ ಬರೆದಿರುವ ಟಿ ಶರ್ಟ್ ಧರಿಸಿದ ಯುವಕನೊಬ್ಬನನ್ನು ಕಾಣಬಹುದು.

ಕೇರಳದಲ್ಲಿ ಈ ಘಟನೆ ನಡೆದಿದೆ ಎಂಬ ಸಂದೇಶ ಹರಿದಾಡಿದ್ದರಿಂದ ಆಲ್ಟ್ ನ್ಯೂಸ್  ಕೇರಳ ಪೊಲೀಸರನ್ನು ಸಂಪರ್ಕಿಸಿದಾಗ ಈ ಬಗ್ಗೆ ಮಾಹಿತಿ ಸಿಕ್ಕಿದರೆ ತಿಳಿಸುವುದಾಗಿ ಪೊಲೀಸರು ಹೇಳಿದ್ದರು. ಆದಾಗ್ಯೂ, ಈ ಚಿತ್ರದ ಮೂಲ ಯಾವುದು ಎಂಬುದು ತಿಳಿದಿಲ್ಲದಿದ್ದರೂ, ಇದು ಕೇರಳದಲ್ಲಿ ನಡೆದ ಘಟನೆಯಂತೂ ಅಲ್ಲ.

(screenshot ಕೃಪೆ: ಆಲ್ಟ್ ನ್ಯೂಸ್)

ಈ ಚಿತ್ರಗಳು ಟ್ವಿಟರ್‍‍ನಲ್ಲಿ ಶೇರ್ ಆದಾಗ ಕೆಲವರು ಕೇರಳ ಪೊಲೀಸ್ ಟ್ವಿಟರ್‍ ಹ್ಯಾಂಡಲ್‍ನ್ನು ಟ್ಯಾಗ್  ಮಾಡಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಆದರೆ ಕೋಮುಸೌಹಾರ್ದ ಕದಡುವ ಸಂದೇಶಗಳನ್ನು ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದರಿಂದ ಶಂಖ್‍ನಾದ್  ಮತ್ತು BhaiyyaBabu ಟ್ವಿಟರ್ ಹ್ಯಾಂಡಲ್‍ಗಳು ಈ  ಟ್ವೀಟ್‍ನ್ನು ಅಳಿಸಿವೆ. ಆದರೆ ಇದೇ ಸಂದೇಶ ಈಗಲೂ ವಾಟ್ಸ್ಆ್ಯಪ್ ಮತ್ತು ಫೇಸ್‍ಬುಕ್‍ನಲ್ಲಿ ಹರಿದಾಡುತ್ತಿದೆ. ಇದೇ ಸಂದೇಶ We Support Narendra Modi ಎಂಬ ಪೇಜ್‍ನಲ್ಲಿ ಶೇರ್ ಆಗಿತ್ತು. ಆ ಪೋಸ್ಟ್ 2500ಕ್ಕಿಂತ ಹೆಚ್ಚು ಬಾರಿ ಶೇರ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT