ಮಂಗಳವಾರ, ಜನವರಿ 21, 2020
23 °C

ಅತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ ಪೊಲೀಸರಿಗೆ ರಾಜಕೀಯ ನಾಯಕರ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Mayawati

ನವದೆಹಲಿ: ತೆಲಂಗಾಣದ ಪಶುವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಪ್ರಕರಣದ ಎಲ್ಲ ಆರೋಪಿಗಳನ್ನು ಶುಕ್ರವಾರ ಮುಂಜಾನೆ ಎನ್‌ಕೌಂಟರ್ ಮಾಡಿದ ಪೊಲೀಸರನ್ನು ರಾಜಕಾರಣಿಗಳು ಅಭಿನಂದಿಸಿದ್ದಾರೆ.

ಉತ್ತರ ಪ್ರದೇಶ ಮತ್ತು ದೆಹಲಿ ಪೊಲೀಸರು ಹೈದರಾಬಾದ್ ಪೊಲೀಸರಿಂದ ಸ್ಫೂರ್ತಿ ಪಡೆಯಬೇಕು. ದುರದೃಷ್ಟವಶಾತ್ ಇಲ್ಲಿ ಅಪರಾಧಿಗಳನ್ನು ಅತಿಥಿಯಂತೆ ನೋಡಲಾಗುತ್ತಿದೆ.  ಉತ್ತರಪ್ರದೇಶದಲ್ಲಿ ಜಂಗಲ್ ರಾಜ್ ನಡೆಯುತ್ತಿದೆ. ಉತ್ತಮ ಕಾರ್ಯಕ್ಕಾಗಿ ಈ ನಿಲುವುಗಳ ಬದಲಾಗಲಿ ಎಂದು ಬಿಎಸ್‌ಪಿ ಮಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ.  ಆದರೆ ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.

ಇದನ್ನೂ ಓದಿತೆಲಂಗಾಣದ ಪಶುವೈದ್ಯೆ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳ ಎನ್‌ಕೌಂಟರ್

ಈ ಶತಮಾನದಲ್ಲಿ ನಡೆದ ಪ್ರಮುಖ ಘಟನೆ ಇದು.  ಇದು ಮಹಿಳೆಯರ ಸುರಕ್ಷತೆ ಬಗ್ಗೆ ಭರವಸೆ ನೀಡುತ್ತದೆ. ಅಪರಾಧಿಗಳಿಗೆ ತಕ್ಷಣ  ಶಿಕ್ಷೆ ವಿಧಿಸುವುದಕ್ಕೆ ಇತರ ರಾಜ್ಯಗಳಿಗೂ ಹೊಸ ದಾರಿ ಸಿಕ್ಕಿದಂತಾಯಿತು ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಟ್ವೀಟಿಸಿದ್ದಾರೆ. 

ಅತೀವ ನೋವನ್ನು ಅನುಭವಿಸಿದ ಸಂತ್ರಸ್ತೆಯ ಕುಟುಂಬಕ್ಕೆ ನನ್ನ ಸಂತಾಪಗಳು. ಈಗ ಸಂತ್ರಸ್ತ್ರೆಯ ಆತ್ಮಕ್ಕೆ ಶಾಂತಿ ಲಭಿಸಿರಬಹುದು. ಭಾರತದ ಇತರ ಹೆಣ್ಣು ಮಕ್ಕಳ  ಭಯವೂ  ಈಗ ಸ್ವಲ್ಪ ಕಡಿಮೆಯಾಗಿರುತ್ತದೆ. ಜೈ ತೆಲಂಗಾಣ ಪೊಲೀಸ್ ಎಂದದು ಉಮಾ ಭಾರತಿ ಸರಣಿ ಟ್ವೀಟ್ ಮಾಡಿದ್ದಾರೆ.

ಹೈದರಾಬಾದ್ ಪೊಲೀಸರನ್ನು ಅಭಿನಂದಿಸಿ ಟ್ವೀಟಿಸಿದ ರಾಜ್ಯವರ್ಧನ್ ರಾಥೋಡ್, ಇದು ದೇಶಕ್ಕೆ ಮಾದರಿ ಎಂದಿದ್ದಾರೆ. 

ಒಬ್ಬ  ಸಾಮಾನ್ಯ ಪ್ರಜೆಯಾಗಿ ನಾನು ಖುಷಿ  ಪಡುತ್ತೇನೆ. ಇಂಥದೊಂದು ಅಂತ್ಯವನ್ನು ನಾವು ಬಯಸಿದ್ದೆವು. ಆದರೆ ಈ ಅಂತ್ಯ ಕಾನೂನು ವ್ಯವಸ್ಥೆಯ ಮೂಲಕ ಆಗಿರಬೇಕಿತ್ತು. ಸರಿಯಾದ ರೀತಿಯಲ್ಲಿ ಈ ಕಾರ್ಯ ನಡೆಯಬೇಕಿತ್ತು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅಭಿಪ್ರಾಯ ಪಟ್ಟಿದ್ದಾರೆ. 

ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಸಿಗಬೇಕೆಂದು ಬಯಸಿದ್ದೆವು. ಇಲ್ಲಿ ಪೊಲೀಸರೇ ನಿರ್ಧಾರ ಕೈಗೊಂಡಿದ್ದಾರೆ, ಯಾವ ಸಂದರ್ಭದಲ್ಲಿ ಇದು ನಡೆಯಿತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಶರ್ಮಾ  ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು