ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಕೆ.ಜಿ ಚಿನ್ನ ಹಾಕುತ್ತಿದ್ದ 'ಗೋಲ್ಡ್‌ ಮ್ಯಾನ್' ಸಾಮ್ರಾಟ್‌ ಮೊಜೆ ಇನ್ನಿಲ್ಲ

Last Updated 9 ಮೇ 2020, 3:06 IST
ಅಕ್ಷರ ಗಾತ್ರ

ಪುಣೆ: 'ಗೋಲ್ಡ್‌ ಮ್ಯಾನ್' ಎಂದೇ ಖ್ಯಾತಿಯಾಗಿದ್ದ ಮಹಾರಾಷ್ಟ್ರದ ಉದ್ಯಮಿ ಸಾಮ್ರಾಟ್ ಮೊಜೆ ಹೃದಯಾಘಾತದಿಂದ ಮೃತಪಟ್ಟಿರುವುದುತಡವಾಗಿ ವರದಿಯಾಗಿದೆ.

ಸಾಮ್ರಾಟ್ ಮೊಜೆ ಅವರಿಗೆ 39 ವರ್ಷ ವಯಸ್ಸಾಗಿತ್ತು. ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಮೊಜೆ ಅವರಿಗೆ ಮಂಗಳವಾರ ಹೃದಯಾಘಾತವಾಗಿತ್ತು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಅವರ ಅಂತ್ಯಕ್ರಿಯೆಯನ್ನು ಪುಣೆಯ ಯರವಾಡದ ಬಳಿ ಕೆಲವೇ ಜನರ ಸಮ್ಮುಖದಲ್ಲಿ ನೆರವೇರಿಸಲಾಯಿತು ಎಂದು ಮೊಜೆ ಕುಟುಂಬಮೂಲಗಳು ತಿಳಿಸಿವೆ.

ಸಾಮ್ರಾಟ್‌ಮೊಜೆ ಮೈಮೇಲೆ ಸದಾ 8 ರಿಂದ 10 ಕೆ.ಜಿ ಬಂಗಾರ ಹಾಕಿಕೊಂಡು ಒಡಾಡುತ್ತಿದ್ದರು. ಅವರನ್ನು ಸ್ಥಳೀಯರುಗೋಲ್ಡ್‌ ಮ್ಯಾನ್‌ ಎಂದು ಕರೆಯುತ್ತಿದ್ದರು.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಚಿನ್ನ ಹಾಕಿಕೊಂಡು ಒಡಾಡುತ್ತಿದ್ದ ಮೂವರು ಉದ್ಯಮಿಗಳು ಮೃತಪಟ್ಟಿದ್ದಾರೆ. 2011ರಲ್ಲಿ ಎಂಎನ್‌ಎಸ್‌ ಶಾಸಕ ರಮೇಶ್‌ ವಂಜಾಲೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಇವರು ಕೂಡ ಕೆ.ಜಿಗಟ್ಟಲೇ ಚಿನ್ನ ಹಾಕಿಕೊಳ್ಳುತ್ತಿದ್ದರು.

ಚಿನ್ನದ ಅಂಗಿಯನ್ನು ಹಾಕಿಕೊಳ್ಳುತ್ತಿದ್ದ ಉದ್ಯಮಿ ದತ್ತಾತ್ರೇಯ ಫುಂಗೆಯನ್ನು 12 ಜನರ ಗುಂಪು ಹಲ್ಲೆ ಮಾಡಿ ಹತ್ಯೆ ಮಾಡಿತ್ತು. ಈ ಘಟನೆ 2016ರಲ್ಲಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT