ಭಾನುವಾರ, ಮಾರ್ಚ್ 7, 2021
19 °C

ಮುಂಬೈಗೆ ಬಂದಿಳಿದ 572 ಭಾರತೀಯರಿಗೆ ಕ್ವಾರಂಟೈನ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಲಾಕ್‌ಡೌನ್‌ನಿಂದ ವಿದೇಶದಲ್ಲಿ ಸಿಲುಕಿದ್ದ 572 ಮಂದಿ ಭಾನುವಾರ ಬೆಳಿಗ್ಗೆ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಲಂಡನ್‌ ಮತ್ತು ಸಿಂಗಪುರದಿಂದ ಎರಡು ವಿಮಾನಗಳಲ್ಲಿ ಈ ಪ್ರಯಾಣಿಕರು ಆಗಮಿಸಿದರು. ವಿಮಾನ ನಿಲ್ದಾಣದಲ್ಲೇ ಎಲ್ಲರನ್ನೂ ಕೇಂದ್ರ ಸರ್ಕಾರದ ನಿರ್ದೇಶನದಂತೆ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಇವರಲ್ಲಿ ಬಹುತೇಕ ಪ್ರಯಾಣಿಕರು ಮುಂಬೈ ನಿವಾಸಿಗಳು. ಕೆಲವರು ಪುಣೆ, ಧುಲೆ, ಕೊಲ್ಹಾಪುರ ನಗರದವರಾಗಿದ್ದಾರೆ.

ಮುಂಬೈ ನಿವಾಸಿಗಳನ್ನು ಕ್ವಾರಂಟೈನ್‌ಗಾಗಿ ವಿಮಾನ ನಿಲ್ದಾಣ ಸಮೀಪದ ಹೋಟೆಲ್‌ಗಳಿಗೆ ಕರೆದೊಯ್ಯಲಾಯಿತು. ಇತರ ನಗರಗಳ ಪ್ರಯಾಣಿಕರನ್ನು  ಆಯಾ ಸ್ಥಳಗಳಿಗೆ ಕರೆದೊಯ್ದು  ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿರುವ ಹೋಟೆಲ್‌ಗಳಲ್ಲಿ ಇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು