ಉದ್ಯೋಗ ಖಾತ್ರಿ ವಿಚಾರದಲ್ಲಿ ಪ್ರಧಾನಿ ಮೋದಿ ಯು–ಟರ್ನ್: ರಾಹುಲ್ ಗಾಂಧಿ ವ್ಯಂಗ್ಯ

ನವದೆಹಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಯು–ಟರ್ನ್ ಹೊಡೆದಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು #ModiUturnOnMNREGA ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿರುವ ಅವರು, ‘ನರೇಗಾ ದೂರದೃಷ್ಟಿಯನ್ನು ಅರ್ಥ ಮಾಡಿಕೊಂಡು ಹೆಚ್ಚುವರಿ ₹40 ಸಾವಿರ ಕೋಟಿ ಅನುದಾನ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ’ ಎಂದು ಕುಹುಕವಾಡಿದ್ದಾರೆ.
प्रधानमंत्री ने UPA काल में सृजित MNREGA स्कीम के लिए 40,000 करोड़ का अतिरिक्त बजट देने की मंज़ूरी दी है। MNREGA की दूरदर्शिता को समझने और उसे बढ़ावा देने के लिए हम उनके प्रति आभार प्रकट करते हैं।#ModiUturnOnMNREGA pic.twitter.com/XMOmhXhVeD
— Rahul Gandhi (@RahulGandhi) May 18, 2020
ಟ್ವೀಟ್‌ನೊಂದಿಗೆ 2014ರಲ್ಲಿ ಸಂಸತ್‌ನಲ್ಲಿ ಮೋದಿ ಮಾಡಿದ್ದ ಭಾಷಣದ ತುಣುಕೊಂದನ್ನು ಅಪ್‌ಲೋಡ್ ಮಾಡಿದ್ದಾರೆ. ಈ ಭಾಷಣದಲ್ಲಿ ನರೇಗಾ ಯೋಜನೆಯನ್ನು ಹೀಯಾಳಿಸಿದ್ದ ಮೋದಿ ಅವರು, ‘ಈ ಯೋಜನೆ ಕಾಂಗ್ರೆಸ್‌ನ ವೈಫಲ್ಯದ ಸ್ಮಾರಕ. ಸ್ವಾತಂತ್ರ್ಯ ದೊರಕಿ 60 ವರ್ಷ ಕಳೆದರೂ ಜನರನ್ನು ಗುಂಡಿ ತೋಡಲು ಕಾಂಗ್ರೆಸ್ ಕಳುಹಿಸುತ್ತಿದೆ’ ಎಂದಿದ್ದರು.
ಇದನ್ನೂ ಓದಿ: ನರೇಗಾ ಎಂಬ ಆಪದ್ಬಾಂಧವ: ಗ್ರಾಮೀಣ ಉದ್ಯೋಗ ಸೃಷ್ಟಿಯಿಂದ ಬಡತನ ನಿವಾರಣೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.