ಶನಿವಾರ, ಏಪ್ರಿಲ್ 4, 2020
19 °C

ಮುಂಬೈ ರೈಲು ಅಪಘಾತ: ಪ್ರತಿ ವರ್ಷ 2,500 ಬಲಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಖ್ಯಾತಿಯ ಮುಂಬೈ ಪಾಲಿಗೆ ಉಪನಗರ ರೈಲು ಜಾಲ ಜೀವನಾಡಿ ಇದ್ದಂತೆ. ಆದರೆ, ಈ ರೈಲು ಮಾರ್ಗದಲ್ಲಿ ಸಂಭವಿಸುವ ವಿವಿಧ ಅಪಘಾತಗಳಿಗೆ ಪ್ರತಿ ವರ್ಷ 2,500ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಅಧ್ಯಯನದಿಂದ ತಿಳಿದು ಬಂದಿದೆ.

ರೈಲ್ವೆ ಪೊಲೀಸ್‌ ಕಮಿಷನರೇಟ್‌ ಕೈಗೊಂಡಿರುವ ಸಮೀಕ್ಷೆ ಪ್ರಕಾರ, 2019ರಲ್ಲಿ 2,691 ಜನರು ಮೃತಪಟ್ಟು, 3,198 ಜನರು ಗಾಯಗೊಂಡಿದ್ದಾರೆ.

2017ರಲ್ಲಿ 3,014 ಜನ ಮೃತಪಟ್ಟಿದ್ದರೆ, 3,345 ಜನರು ಗಾಯಗೊಂಡಿದ್ದರು. 2018ರಲ್ಲಿ ಮೃತರ ಹಾಗೂ ಗಾಯಗೊಂಡವರ ಪ್ರಮಾಣ ಕ್ರಮವಾಗಿ 2,981 ಹಾಗೂ 3,349 ಎಂದು ಇದೇ ಸಮೀಕ್ಷೆ ಹೇಳುತ್ತದೆ.

ಬಂಡೆ ಉರುಳಿ ಐವರ ದುರ್ಮರಣ
ಶ್ರೀನಗರ: ಮನೆಯೊಂದರ ಮೇಲೆ ಬೃಹತ್‌ ಗಾತ್ರದ ಬಂಡೆ ಉರುಳಿ ಬಿದ್ದು ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ಉದಂಪುರ ಜಿಲ್ಲೆಯ ಬರ್‌ಮೀನ್‌ ಕೇನ್‌ ಎಂಬಲ್ಲಿ ನಡೆದಿದೆ.

ತಾಯಿಯೊಂದಿಗೆ ಮಲಗಿದ್ದ ಮೂವರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವಿನ ಮೇಲೆ ಬಂಡೆ ಉರುಳಿ ಎಲ್ಲರೂ ಸ್ಥಳದಲ್ಲೇ
ಮೃತಪಟ್ಟಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು