ಭಾನುವಾರ, ಸೆಪ್ಟೆಂಬರ್ 22, 2019
22 °C

ಜಯದ ಭರವಸೆ ಇದ್ದರೆ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿ: ವಿಪಕ್ಷಗಳಿಗೆ ಸಿಂಗ್ ಸವಾಲು

Published:
Updated:
Prajavani

ನವದೆಹಲಿ: ‘ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ನಿಮಗೆ ಇದ್ದರೆ, ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಘೋಷಿಸಿ’ ಎಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ವಿರೋಧ ಪಕ್ಷಗಳಿಗೆ ಮಂಗಳವಾರ ಸವಾಲು ಹಾಕಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಮ್ಮ ನಾಯಕ ಯಾರು ಎಂಬುದನ್ನು ತಿಳಿಸದೆ ಜನರ ಮುಂದೆ ಕಣ್ಣಾಮುಚ್ಚಾಲೆ ಆಡಬೇಡಿ. ಆರೋಗ್ಯಪೂರ್ಣ ಪ್ರಜಾಪ್ರಭುತ್ವದಲ್ಲಿ ಜನರನ್ನು ಕತ್ತಲಲ್ಲಿಡುವುದು ಸರಿಯಲ್ಲ. 2014ರ ಚುನಾವಣೆಯನ್ನು ‘ಮೋದಿ ವಿರುದ್ಧ ಮನಮೋಹನ ಸಿಂಗ್‌ ಹಾಗೂ ಸೋನಿಯಾ ಗಾಂಧಿ ಹೋರಾಟ’ ಎಂದು ವಿರೋಧಪಕ್ಷಗಳು ಬಣ್ಣಿಸಿದ್ದವು. ಈಗ ಮೋದಿ ವಿರುದ್ಧ ಯಾರ ಹೋರಾಟ’ ಎಂದು ಸಿಂಗ್‌ ಪ್ರಶ್ನಿಸಿದರು.

‘ಬಿಜೆಪಿಗೆ 2014ರ ಚುನಾವಣೆಯಲ್ಲಿ ಲಭಿಸಿದ್ದಕ್ಕಿಂತ ಹೆಚ್ಚಿನಸ್ಥಾನಗಳು ಈ ಬಾರಿ ಲಭಿಸಲಿವೆ. ಎನ್‌ಡಿಎ ಮೂರನೇ ಎರಡ
ರಷ್ಟು ಸ್ಥಾನಗಳನ್ನು ಪಡೆಯುವುದು ಖಚಿತ’ ಎಂದರು.

Post Comments (+)