ಮಂಗಳವಾರ, ಫೆಬ್ರವರಿ 18, 2020
20 °C

ಗೋವಾ ರಾಜಕೀಯದಲ್ಲಿ ಬದಲಾವಣೆ: ರಾವುತ್‌ ಹೇಳಿಕೆಗೆ ಸಚಿವ ರಾಣೆ ತಿರುಗೇಟು

ಪಿಟಿಐ Updated:

ಅಕ್ಷರ ಗಾತ್ರ : | |

ಪಣಜಿ: ಮಹಾರಾಷ್ಟ್ರದಂತೆ ಕರಾವಳಿ ರಾಜ್ಯದ ರಾಜಕೀಯದಲ್ಲೂ ದೊಡ್ಡ ಮಟ್ಟದ ಬದಲಾವಣೆ ಆಗುವ ಬಗ್ಗೆ ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ಅವರ ಹೇಳಿಕೆಗೆ ಗೋವಾ ಸಚಿವ ವಿಶ್ವಜಿತ್‌ ರಾಣೆ ತಿರುಗೇಟು ನೀಡಿದ್ದಾರೆ.

‘ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರ ನಾಯಕತ್ವದಲ್ಲಿ ಬಿಜೆಪಿಯ 27 ಶಾಸಕರು ವಿಶ್ವಾಸ ಹೊಂದಿದ್ದಾರೆ. ರಾಜಕೀಯ ಅಸ್ಥಿರತೆಗೆ ಯಾವುದೇ ಅವಕಾಶವಿಲ್ಲ. ಗೋವಾದಲ್ಲಿ ಶಿವಸೇನಾ ಒಬ್ಬ ಶಾಸಕನನ್ನೂ ಹೊಂದಿಲ್ಲ. ಆದರೂ, ಬಿಜೆಪಿ ಹೊರತಾದ ಮೈತ್ರಿಕೂಟ ರಚನೆ ಬಗ್ಗೆ ಶಿವಸೇನಾ ಹೇಳುತ್ತಿದೆ. ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲು ಯಾವೊಬ್ಬ ಶಾಸಕರೂ ಶಿವಸೇನಾದಂಥ ಕೀಳುಮಟ್ಟದ ಪಾರ್ಟಿ ಜೊತೆಗೆ ಕೈಜೋಡಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಗೋವಾದಲ್ಲಿ ಬಿಜೆಪಿ ಅನೈತಿಕತೆಯಿಂದ ಅಧಿಕಾರಕ್ಕೆ ಬಂದಿದೆ. ಶೀಘ್ರದಲ್ಲಿಯೇ ದೊಡ್ಡ ಮಟ್ಟದ ಬದಲಾವಣೆ ಆಗಲಿದೆ’ ಎಂದು ರಾವುತ್‌ ಅವರು ಕಳೆದ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಗೋವಾದ ಕೆಲವು ಶಾಸಕರಿಗೆ ಹೇಳಿದ್ದರು.

ಮಹದಾಯಿ ನದಿ ನೀರಿನ ವಿವಾದ ಪ್ರಸ್ತಾಪಿಸಿದ ರಾಣೆ, ವಿರೋಧ ಪಕ್ಷವಾದ ಕಾಂಗ್ರೆಸ್‌ನ ಕೆಲವರು ಮಹದಾಯಿ ನದಿಯನ್ನೇ ನೋಡಿಲ್ಲ. ಆದರೂ ಅದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು