ಶನಿವಾರ, ಜನವರಿ 25, 2020
22 °C

ಪಶುವೈದ್ಯೆ ಅತ್ಯಾಚಾರ ಬಳಿಕ ಪೆಪ್ಪರ್‌ ಸ್ಪ್ರೇ ಮಾರಾಟದಲ್ಲಿ ಶೇ 700%ರಷ್ಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶವನ್ನೇ ಬೆಚ್ಚಿ ಬೀಳಿಸಿದ್ದ ತೆಲಂಗಾಣದ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ(ದಿಶಾ ಪ್ರಕರಣ) ಬಳಿಕ ದೇಶದಾದ್ಯಂತ ಪೆಪ್ಪರ್‌ ಸ್ಪ್ರೇ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ಇ–ಕಾಮರ್ಸ್‌ ದೈತ್ಯ ಸಂಸ್ಥೆ ಅಮೆಜಾನ್‌ ತಿಳಿಸಿದೆ.

ಅಮೆಜಾನ್‌ ಪ್ರಕಾರ ಪೆಪ್ಪರ್‌ ಸ್ಪ್ರೇ ಮಾರಾಟದಲ್ಲಿ 700% ರಷ್ಟು ವೃದ್ಧಿಯನ್ನು ಕಂಡಿದೆ. ವೆಬ್‌ಸೈಟ್‌ನ 10 ಅತೀ ಹೆಚ್ಚು ಮಾರಾಟವಾದ ವಸ್ತುಗಳಲ್ಲಿ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದ ವಸ್ತುಗಳಾಗಿವೆ ಎಂದು ಅಮೆಜಾನ್ ಇಂಡಿಯಾ ತಿಳಿಸಿದೆ.

ಬೆಂಗಳೂರು ಮೂಲದ ಅಲೆಕ್ಸ್‌ ಗ್ಲೊಬಲ್‌ ಕಂಪನಿ ಕೊಬ್ರಾ ಬ್ರ್ಯಾಂಡ್‌ನ ಪೆಪ್ಪರ್‌ ಸ್ಪ್ರೇ ತಯಾರಿಸುತ್ತಿದೆ. ಹೈದರಬಾದ್‌ ಘಟನೆಯ ಬಳಿಕ ಬೇಡಿಕೆ ಹೆಚ್ಚಾಗಿದ್ದು ‌ದಾಸ್ತಾನು ಮುಗಿದಿದೆ ಎಂದು ಅಲೆಕ್ಸ್‌ ಕಂಪನಿ ಹೇಳಿದೆ. 

ಆತ್ಮರಕ್ಷಣೆಗಾಗಿ ಕರಾಟೆ ಮತ್ತು ಜಿಮ್‌ಗಳಿಗೆ ಸೇರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು