ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾ ವಾರಿಯರ್‌ ಮೇಲಿನ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

Last Updated 31 ಆಗಸ್ಟ್ 2018, 11:57 IST
ಅಕ್ಷರ ಗಾತ್ರ

ನವದೆಹಲಿ: ‘ಒರು ಅಡಾರ್‌ ಲವ್‌’ ಚಿತ್ರದಲ್ಲಿ ಕಣ್ಣು ಮಿಟುಕಿಸುವ ಮೂಲಕ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌)ಯನ್ನು ಶುಕ್ರವಾರ ಸುಪ್ರೀಂಕೋರ್ಟ್‌ ವಜಾಗೊಳಿಸಿದೆ.

‘ವಾರಿಯರ್‌ ಅಭಿನಯಿಸಿರುವ ಈ ಜಾನಪದ ಹಾಡು 1978ರಿಂದ ಬಳಸುತ್ತಿದ್ದಾರೆ. ಈ ಕಾರಣದಿಂದ ಈ ಹಾಡನ್ನು ಧರ್ಮನಿಂದನೆ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ’ ಎಂದುಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ,ನ್ಯಾಯಮೂರ್ತಿ ಎ.ಎಂ ಖಾನ್‌ವಿಲ್ಕರ್‌ ನೇತೃತ್ವದ ವಿಭಾಗೀಯ ಪೀಠವು ತೀರ್ಪಿನಲ್ಲಿ ತಿಳಿಸಿದೆ.

‘ವಾರಿಯರ್‌ ಮತ್ತು ಇತರರ ವಿರುದ್ಧ ತೆಲಂಗಾಣದಲ್ಲಿ ದಾಖಲಾಗಿರುವ ಎಫ್‌ಐಆರ್‌ ಅನ್ನು ವಜಾಗೊಳಿಸಲಾಗಿದೆ. ಜೊತೆಗೆ, ಈ ಚಿತ್ರಕ್ಕೆ ಸಂಬಂಧಿಸಿದಂತೆ ನಟಿ ಹಾಗೂ ಚಿತ್ರದ ನಿರ್ದೇಶಕರ ವಿರುದ್ಧ ಸಿಆರ್‌ಪಿಸಿ ಕಲಂ 200ರ ಅಡಿಯಲ್ಲಿ ಯಾವುದೇ ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲು ಮಾಡಬಾರದು’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಕ್ರಿಕೆಟಿಗ ಎಂ.ಎಸ್‌.ಧೋನಿ ವಿರುದ್ಧ ಇಂತಹುದ್ದೇ ಪ್ರಕರಣ ದಾಖಲಾಗಿದ್ದ ವೇಳೆ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಭಾರತೀಯ ದಂಡಸಂಹಿತೆ 295ಎ ಕಲಂ ಅಡಿಯಲ್ಲಿ ನಟಿ ಮತ್ತು ಇತರರು ಯಾವುದೇ ಅಪರಾಧ ಎಸಗಿಲ್ಲ ಎಂದು ತಿಳಿಸಿತು.

ಐಪಿಸಿ 295ಎ ಕಲಂ ಪ್ರಕಾರ, ಯಾವುದೇ ಧರ್ಮದ ಅವಹೇಳನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದಾಗಿದೆ.

ಏನೀದು ಪ್ರಕರಣ ?
‘ಒರು ಅಡಾರ್‌ ಲವ್‌’ ಚಿತ್ರದ ಮಾಣಿಕ್ಯ ಮಲರಾಯ ಪೂವಿ' ಗೀತೆ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಕೆಲವು ಮುಸ್ಲಿಮರು ನೀಡಿದ ದೂರಿನ ಅನ್ವಯ ಫೆಬ್ರುವರಿ 14ರಂದು ಪ್ರಿಯಾ ವಿರುದ್ಧ ಹೈದರಾಬಾದಿನ ಫಲಕ್‌ನಾಮಾ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿತ್ತು.

ಇದರ ಬೆನ್ನಲ್ಲೇ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ನಟಿ, ತನ್ನ ಮೇಲೆ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸಬೇಕು ಹಾಗೂ ವಿವಿಧ ರಾಜ್ಯಗಳಲ್ಲಿ ನಡೆಸುತ್ತಿರುವ ಕ್ರಿಮಿನಲ್‌ ವಿಚಾರಣೆಗೂ ತಡೆಯೊಡ್ಡಬೇಕು ಎಂದು ಮನವಿ ಮಾಡಿದ್ದರು.

‘ಮಲಯಾಳಂಯೇತರ ರಾಜ್ಯಗಳಲ್ಲಿ ದೂರು ದಾಖಲಿಸಿರುವವರು ಹಾಡನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಪ್ರವಾದಿ ಮಹಮದ್ ಹಾಗೂ ಅವರ ಮೊದಲ ಪತ್ನಿ ಖದೀಜಾ ಅವರ ನಡುವಿನ ಪ್ರೀತಿಯನ್ನು ಹಾಡು ಶ್ಲಾಘಿಸುತ್ತದೆ’ ಎಂದು ಅರ್ಜಿಯಲ್ಲಿ ತಿಳಿಸಿದ್ದರು.

ಇದು ಜಾನಪದ ಹಾಡು. ಜಬ್ಬಾರ್ ಎಂಬುವರು 1978ರಲ್ಲಿ ರಚಿಸಿದ್ದಾರೆ. ಕಳೆದ 40 ವರ್ಷಗಳಿಂದ ಮುಸ್ಲಿಮರು ಇದನ್ನು ಬಳಸುತ್ತಿದ್ದು, ಈಗೇಕೆ ವಿರೋಧಿಸುತ್ತಿದ್ದಾರೆ ಎಂದು ಪ್ರಿಯಾ ಅವರು ಅರ್ಜಿಯಲ್ಲಿ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT