ಶನಿವಾರ, ಸೆಪ್ಟೆಂಬರ್ 18, 2021
26 °C

ನನ್ನ ಮೇಲಿನ ದಾಳಿ ದೇಶದ ಜನರಿಗೆ ಮಾಡಿದ ಅಪಮಾನ

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ‘ನನಗೆ ಕಪಾಳ ಮೋಕ್ಷ ಮಾಡಿರುವುದು ಇಡೀ ದೆಹಲಿ ಜನರಿಗೆ ಅವಮಾನ ಮಾಡಿದಂತೆ. ನಿನ್ನೆಯ ಘಟನೆ ಬಿಜೆಪಿ ಮಾರ್ಗದರ್ಶನದಲ್ಲೇ ನಡೆದಿದೆ,’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಭಾನುವಾರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್‌ ಕೇಜ್ರಿವಾಲ್‌, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧ್ವನಿ ಎತ್ತುವವರ ದಾಳಿ ನಡೆಸಲಾಗುತ್ತಿದೆ. ಇದು ಮೋದಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.

ಕೇಜ್ರಿವಾಲ್‌ ರಾಜಕರಣಕ್ಕೆ ಬಂದ ಮೇಲಿಂದ 9 ಬಾರಿ ದಾಳಿ ನಡೆಸಲಾಗಿದೆ. ಮುಖ್ಯಮಂತ್ರಿಯಾದಗಿನಿಂದ 5 ಭಾರಿ ದಾಳಿ ಮಾಡಲಾಗಿದೆ. ಈ ದೇಶದ ಯಾವ ರಾಜ್ಯದ ಮುಖ್ಯಮಂತ್ರಿಗಳ ಮೇಲೆಯೂ ದಾಳಿ ನಡೆದ ಉದಾರಹಣೆಗಳಿಲ್ಲ ಎಂದು ಎಎಪಿ ಮುಖಂಡರೊಬ್ಬರು ತಿಳಿಸಿದರು. 

ದೆಹಲಿ ಮುಖ್ಯಮಂತ್ರಿಯ ಭದ್ರತೆ ಜವಾಬ್ದಾರಿ ವಿರೋಧ ಪಕ್ಷಗಳ ಕೈಯಲ್ಲಿ ಇರುವುದು ದುರಂತ ಎಂದು ಕೇಜ್ರಿವಾಲ್ ವಿಷಾದ ವ್ಯಕ್ತಪಡಿಸಿದರು.

ಶನಿವಾರ ಕೇಜ್ರಿವಾಲ್‌ ರೋಡ್‌ ಶೋ ನಡೆಸುವ ವೇಳೆ ಸುರೇಶ್‌ ಚೌಹಾಣ್ ಎಂಬುವರು ಕಪಾಳ ಮೋಕ್ಷ ಮಾಡಿದ್ದರು. ಸುರೇಶ್‌ ಚೌಹಾಣ್‌ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು