ಭಾನುವಾರ, ಏಪ್ರಿಲ್ 5, 2020
19 °C

ಲೈಂಗಿಕ ಕಿರುಕುಳ: ಒಬ್ಬನ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಜೋಧಪುರ: ಭಾರತೀಯ ವಾಯಪಡೆಯ ಮಹಿಳಾ ಅಧಿಕಾರಿಯೊಬ್ಬರನ್ನು ಕಾರಿನಲ್ಲಿ ಹಿಂಬಾಲಿಸಿದ ಪುರುಷರು, ಅಶ್ಲೀಲವಾಗಿ ನಿಂದಿಸಿ, ಅಸಭ್ಯ ವರ್ತನೆ ತೋರಿದ ಪ್ರಕರಣ ಶನಿವಾರ ಜೋಧಪುರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಜೋಧಪುರದ ವಾಯುನೆಲೆಯ ಹೆಲಿಕಾಪ್ಟರ್ ಯೂನಿಟ್‌ನಲ್ಲಿ ಎಂಐ–17 ಹೆಲಿಕಾಪ್ಟರ್‌ ಚಾಲಕಿಯಾಗಿರುವ ಮಹಿಳಾ ಅಧಿಕಾರಿ ಶನಿವಾರ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ’ ಎಂದು ರತನಾಡ ಪೊಲೀಸ್ ಠಾಣೆಯ ಅಧಿಕಾರಿ ಜುಲ್ಫೀಕರ್ ಮಾಹಿತಿ ನೀಡಿದ್ದಾರೆ. 

‘ಮಹಿಳಾ ಅಧಿಕಾರಿ ಎದುರು ಅಸಭ್ಯ ಸನ್ನೆಗಳನ್ನು ಮಾಡಿದ ಪುರುಷರು ಅಶ್ಲೀಲ ಮಾತುಗಳನ್ನಾಡಿದ್ದಾರೆ. ಅಧಿಕಾರಿ ಸ್ಥಳೀಯ ಅಂಗಡಿ ಬಳಿ ಕೆಲಕಾಲ ನಿಂತರೂ ಆರೋಪಿಗಳ ಕಿರುಕುಳ ತಪ್ಪಲಿಲ್ಲ. ನಂತರ ಆ ಅಧಿಕಾರಿ ಆಫೀಸರ್ಸ್ ಮೆಸ್ ಆವರಣದೊಳಗೆ ಹೋಗಿ ಅಲ್ಲಿದ್ದ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದಾಗ ಅವರು ಪೊಲೀಸ್ ಠಾಣೆಗೆ ದೂರು ನೀಡಿದರು’ ಎಂದು ಪೊಲೀಸರು ವಿವರಿಸಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು