ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸರ್ಕಾರದಲ್ಲಿ ಭಿನ್ನಮತ: ಭೀಮಾ–ಕೋರೆಗಾಂವ್ ಪ್ರಕರಣ ವರ್ಗಾವಣೆಗೆ ವಿರೋಧ

Last Updated 15 ಫೆಬ್ರುವರಿ 2020, 3:05 IST
ಅಕ್ಷರ ಗಾತ್ರ

ಕೊಲ್ಹಾಪುರ (ಮಹಾರಾಷ್ಟ್ರ):ತಮ್ಮ ಮಾತು ಮೀರಿ,ಭೀಮಾ–ಕೋರೆಗಾಂವ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರ್ಧಾರವು ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡಲು ಕಾರಣವಾಗಿದೆ.

ಮುಖ್ಯಮಂತ್ರಿ ನಡೆಯನ್ನುನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ನಾಯಕ ಶರದ್‌ ಪವಾರ್‌ ಕಟುವಾಗಿ ಟೀಕಿಸಿದ್ದಾರೆ. ಭೀಮಾ–ಕೋರೆಗಾಂವ್ ಪ್ರಕರಣವನ್ನುಎನ್‌ಐಎಗೆ ವರ್ಗಾಯಿಸುವುದಕ್ಕೆ ಈ ಹಿಂದೆಯೂ ಎನ್‌ಸಿಪಿ ವಿರೋಧಿಸಿತ್ತು.

‘ಮುಖ್ಯಮಂತ್ರಿಯ ಈ ನಡೆಕಾನೂನು ಸುವ್ಯವಸ್ಥೆಯಲ್ಲಿ ರಾಜ್ಯಕ್ಕಿರುವ ಪರಮಾಧಿಕಾರ ಉಲ್ಲಂಘಿಸುವಸಂವಿಧಾನಬಾಹಿರ ನಿರ್ಧಾರ’ ಎಂದು ಪವಾರ್ ಶುಕ್ರವಾರ ಟೀಕಿಸಿದ್ದಾರೆ.

‘ಪ್ರಕರಣದ ತನಿಖೆ ನಡೆಸುತ್ತಿದ್ದ ಕೆಲ ಪೊಲೀಸ್ ಅಧಿಕಾರಗಳ ನಡೆ ಆಕ್ಷೇಪಾರ್ಹ. ಈ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಯಬೇಕು ಎಂದು ನಾನು ಬಯಸಿದ್ದೆ. ಆದರೆ ಮಹಾರಾಷ್ಟ್ರ ಸರ್ಕಾರದ ಕೆಲ ಸಚಿವರು ಪೊಲೀಸ್ ಅಧಿಕಾರಿಗಳನ್ನು ಒಂದು ದಿನ ಭೇಟಿಯಾದರು. ಅದೇ ದಿನ ಸಂಜೆ 3 ಗಂಟೆಗೆ ಕೇಂದ್ರ ಸರ್ಕಾರವು ಭೀಮಾ–ಕೋರೆಗಾಂವ್ ತನಿಖೆಯ ಹೊಣೆಯನ್ನು ಎನ್‌ಐಎಗೆ ವರ್ಗಾಯಿಸಿ ಆದೇಶ ಹೊರಡಿಸಿತು. ಅಪರಾಧ ತನಿಖೆ ರಾಜ್ಯದ ಅಧಿಕಾರವ್ಯಾಪ್ತಿಯಲ್ಲಿದೆ. ಅದನ್ನು ಕೇಂದ್ರಕ್ಕೆ ನೀಡುವುದುಸಂವಿಧಾನಬಾಹಿರ ನಿರ್ಧಾರ’ ಎಂದು ಅವರು ಎಎನ್‌ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ರಾಜ್ಯದ ಕೈಯಿಂದ ತನಿಖೆಯ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುವುದು ತಪ್ಪು. ಕೇಂದ್ರದ ನಡೆಯನ್ನು ಮಹಾರಾಷ್ಟ್ರ ಸರ್ಕಾರ ಬೆಂಬಲಿಸಿದ್ದೂ ತಪ್ಪು’ ಎಂದು ಪವಾರ್ ಹೇಳಿದ್ದಾರೆ.‘ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ವಿಚಾರದಲ್ಲಿ ನನ್ನ ಮಾತು ಕೇಳಲಿಲ್ಲ’ ಎಂದು ಮಹಾರಾಷ್ಟ್ರ ಗೃಹ ಸಚಿವ, ಎನ್‌ಸಿಪಿ ನಾಯಕ ಅನಿಲ್ ದೇಶ್‌ಮುಖ್ ಈ ಹಿಂದೆ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಎರಡು ವರ್ಷಗಳ ಹಿಂದೆ ಪುಣೆ ಸಮೀಪದ ಭೀಮಾ–ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಜನವರಿ 1, 2018ರಂದು ನಡೆದಿದ್ದ ಹಿಂಸಾಚಾರಕ್ಕೆ ಕಾರಣವಾದ ಪ್ರಚೋದನಾಕಾರಿ ಭಾಷಣಗಳ ಬಗ್ಗೆ ಮಹಾರಾಷ್ಟ್ರ ಸರ್ಕಾರ ತನಿಖೆ ನಡೆಸಿತ್ತು. ದೇಶದ ವಿವಿಧೆಡೆ ಪ್ರಗತಿಪರ ಚಳವಳಿಗಳೊಂದಿಗೆ ಗುರುತಿಸಿಕೊಂಡಿದ್ದ ಹಲವರನ್ನು ಈ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಜನವರಿ 25ರಂದು ಮಹಾರಾಷ್ಟ್ರ ಸರ್ಕಾರ ತನಿಖೆಯ ಹೊಣೆಯನ್ನು ಎನ್‌ಐಎಗೆ ಬಿಟ್ಟುಕೊಟ್ಟಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT