ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಜನನ ಪ್ರಮಾಣಪತ್ರಗಳನ್ನು ತೋರುವಿರಾ? ಕೇಂದ್ರ ಸಚಿವರಿಗೆ ಕೇಜ್ರಿವಾಲ್‌ ಸವಾಲು

ಎನ್‌ಪಿಆರ್‌ ಮತ್ತು ಎನ್‌ಆರ್‌ಸಿ ವಿರುದ್ಧ ದೆಹಲಿ ವಿಧಾನಸಭೆ ಶುಕ್ರವಾರ ನಿರ್ಣಯ ಅಂಗೀಕಾರ
Last Updated 13 ಮಾರ್ಚ್ 2020, 15:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರೀಯ ಜನಸಂಖ್ಯಾ ನೋಂದಣೆ (ಎನ್‌ಪಿಆರ್‌) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ದೆಹಲಿ ವಿಧಾನಸಭೆ ಶುಕ್ರವಾರ ನಿರ್ಣಯ ಅಂಗೀಕರಿಸಿದೆ.

ಎನ್‌ಆರ್‌ಪಿ ಮತ್ತು ಎನ್‌ಆರ್‌ಸಿಯನ್ನು ವಾಪಾಸು ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಒಂದು ದಿನ ನಡೆದ ವಿಶೇಷ ಅಧಿವೇಶನದಲ್ಲಿಕೇಂದ್ರವನ್ನು ಒತ್ತಾಯಿಸಿದರು.

‘ನಮ್ಮ ಪೌರತ್ವವನ್ನು ಸಾಬೀತು ಪಡಿಸಲು ನನ್ನ, ನನ್ನ ಪತ್ನಿ ಹಾಗೂ ಇಡೀ ಸಚಿವ ಸಂಪುಟದ ಬಳಿ ಜನನ ಪ್ರಮಾಣಪತ್ರ ಇಲ್ಲ. ಹಾಗಾದರೆ, ನಮ್ಮನ್ನು ಬಂಧನ ಕೇಂದ್ರಗಳಿಗೆ ಅಟ್ಟುತ್ತೀರಾ’ ಎಂದು ಕೇಜ್ರಿವಾಲ್‌ ಪ್ರಶ್ನಿಸಿದರು.

ನಿಮ್ಮ ಜನನ ಪ್ರಮಾಣಪತ್ರಗಳನ್ನು ತೋರಿಸುವಂತೆ ಕೇಂದ್ರ ಸಚಿವರಿಗೆ ಕೇಜ್ರಿವಾಲ್‌ ಅವರು ಸವಾಲೆಸೆದರು. ‘ಯಾರ ಬಳಿ ಜನನ ಪ್ರಮಾಣಪತ್ರ ಇದೆ’ ಎಂದು ಕೇಜ್ರಿವಾಲ್‌ ಅವರು ಶಾಸಕರಲ್ಲಿ ಕೇಳಿದಾಗ, 70ರಲ್ಲಿ ಒಂಬತ್ತು ಮಂದಿ ಮಾತ್ರ ಕೈಮೇಲೆತ್ತಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT