ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ ಗಾಯಕಿ ಕನಿಕಾ ಕಪೂರ್‌ಗೆ ಕೋವಿಡ್‌–19

Last Updated 20 ಮಾರ್ಚ್ 2020, 11:06 IST
ಅಕ್ಷರ ಗಾತ್ರ
ADVERTISEMENT
""

ಮುಂಬೈ: ಇತ್ತೀಚೆಗಷ್ಟೇ ಇಂಗ್ಲೆಂಡ್‌ನಿಂದ ಮರಳಿದ್ದ ಗಾಯಕಿ ಕನಿಕಾ ಕಪೂರ್‌ (41) ಅವರಿಗೆ ಕೊರೊನಾ ವೈರಸ್‌ ಸೋಂಕು ತಗುವಿರುವುದು ದೃಢಪಟ್ಟಿದೆ. ಬಾಲಿವುಡ್‌ ಸೆಲೆಬ್ರಿಟಿ ಕನಿಕಾ ಪ್ರತ್ಯೇಕವಾಗಿ ಉಳಿದು ವೈದ್ಯಕೀಯ ಚಿಕಿತ್ಸೆಗಪಡೆಯುತ್ತಿದ್ದಾರೆ.

ಯುನೈಟೆಡ್‌ ಕಿಂಗ್ಡಮ್‌ನಿಂದ ಲಖನೌಗೆ ಬಂದಿಳಿದಿದ್ದ ಕನಿಕಾ, ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ನಗರದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿಯಾಗಿದೆ. 'ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಜ್ವರ ಕಾಣಿಸಿಕೊಂಡಿತು' ಎಂದು ಕನಿಕಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ನಾನೇ ಸ್ವತಃ ಪರೀಕ್ಷೆಗೆ ಒಳಗಾಗಿದ್ದೆ ಹಾಗೂ ಕೋವಿಡ್‌–19 ಪಾಸಿಟಿವ್‌ ಎಂದು ತಿಳಿದು ಬಂದಿತು. ನಾನು ಮತ್ತು ನನ್ನ ಕುಟುಂಬ ಇತರರ ಸಂಪರ್ಕದಿಂದ ದೂರ ಉಳಿದಿದ್ದೇವೆಹಾಗೂ ವೈದ್ಯಕೀಯ ಸಲಹೆಗಳನ್ನು ಪಾಲಿಸುತ್ತಿದ್ದೇವೆ ಎಂದಿದ್ದಾರೆ.

ನಾನು ಯಾರನ್ನೆಲ್ಲ ಸಂಪರ್ಕಿಸಿದ್ದೆ ಎನ್ನುವ ಮಾಹಿತಿಯನ್ನು ಕಲೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. 10 ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿತ್ತು. ಆದರೆ, ನಾನು ಮನೆಗೆ ಬಂದ ನಂತರದಲ್ಲಿ ನಾಲ್ಕು ದಿನಗಳ ಹಿಂದೆಯಷ್ಟೇ ಜ್ವರ, ನೆಗಡಿಯ ಲಕ್ಷಣಗಳು ಕಾಣಿಸಿಕೊಂಡಿತು. ನಿಮಗೂ ಜ್ವರ, ನೆಗಡಿ, ಕೆಮ್ಮಿನಲಕ್ಷಣ ಕಾಣಿಸಿಕೊಂಡರೆ, ಪ್ರತ್ಯೇಕವಾಗಿ ಉಳಿದು ಕೂಡಲೇ ಪರೀಕ್ಷೆಗೆ ಒಳಗಾಗಿ ಎಂದು ಸಲಹೆ ನೀಡಿದ್ದಾರೆ.

'ನಾನಗೀಗಆರೋಗ್ಯ ಪರವಾಗಿಲ್ಲ.ಸಾಮಾನ್ಯ ಜ್ವರ ಮತ್ತು ನೆಗಡಿಯಂತಯೇ ಇದೆ. ನಾವು ಈಗ ಸಂವೇದನಶೀಲನಾಗರೀಕರಾಗಿ ವರ್ತಿಸಬೇಕಿದೆ ಹಾಗೂ ನಮ್ಮ ಸುತ್ತಲಿನವರ ಬಗೆಗೂ ಯೋಚಿಸಬೇಕಿದೆ. ನಾವು ತಜ್ಞರ ಸಲಹೆಗಳನ್ನು ಪಡೆದು, ಸ್ಥಳೀಯ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರ್ದೇಶಗಳನ್ನು ಅನುಸರಿಸುವ ಮೂಲಕ ಆತಂಕ ಪಡದೆ ಇದರಿಂದ ಹೊರ ಬರಬಹುದು. ಎಲ್ಲರಿಗೂ ಉತ್ತಮ ಆರೋಗ್ಯ ಸಿಗಲಿ ಎಂದು ಕೋರುತ್ತೇನೆ' ಎಂದಿದ್ದಾರೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಭಾರತದಲ್ಲಿ 195 ಸೋಂಕು ಪ್ರಕರಣಗಳು ದಾಖಲಾಗಿವೆ. ಶುಕ್ರವಾರ 22 ಹೊಸ ಪ್ರಕರಣಗಳು ವರದಿಯಾಗಿವೆ. ಇಟಲಿಯ 17 ಮಂದಿ, ಫಿಲಿಪ್ಪೀನ್ಸ್‌ನ ಮೂವರು, ಇಂಗ್ಲೆಂಡ್‌ನ ಇಬ್ಬರು, ಕೆನಡಾ, ಇಂಡೋನೇಷ್ಯಾ ಹಾಗೂ ಸಿಂಗಾಪುರ್‌ನ ತಲಾ ಒಬ್ಬರು ಭಾರತದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‌–19ನಿಂದ ಸಾವಿಗೀಡಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

#DaDaDasse

A post shared by Kanika Kapoor (@kanik4kapoor) on

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT