ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಇಂದಿನಿಂದ ಎಸ್‌ಎಂಎಸ್‌ ಸೇವೆ ಲಭ್ಯ, 150 ದಿನಗಳ ನಿರ್ಬಂಧ ತೆರವು

Last Updated 1 ಜನವರಿ 2020, 3:41 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರದ ಎಲ್ಲ ಮೊಬೈಲ್‌ಗಳಿಗೆ ಎಸ್‌ಎಂಎಸ್‌ ಸೇವೆ ಮತ್ತು ಸರ್ಕಾರ ಆಸ್ಪತ್ರೆಗಳಿಗೆ ಬ್ರಾಡ್‌ಬ್ಯಾಂಡ್ ಸೇವೆಯನ್ನು ಮಂಗಳವಾರ ಮಧ್ಯರಾತ್ರಿಯಿಂದ ಮರುಸ್ಥಾಪಿಸಲಾಗಿದೆ. ಕೇಂದ್ರ ಸರ್ಕಾರ ಕಣಿವೆ ರಾಜ್ಯದ ಮೇಲೆ ನಿರ್ಬಂಧ ವಿಧಿಸಿದ್ದ150 ದಿನಗಳ ನಂತರ ಎಸ್‌ಎಂಎಸ್ ಸೇವೆ ಇಲ್ಲಿನ ಜನರಿಗೆ ಲಭ್ಯವಾಗುತ್ತಿದೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿ, ರಾಜ್ಯ ವಿಭಜನೆ ನಿರ್ಧಾರಕ್ಕೆ ಒಂದು ದಿನ ಮೊದಲು,ಆಗಸ್ಟ್‌ 4ರಿಂದ ಕೇಂದ್ರ ಸರ್ಕಾರವುಕಾಶ್ಮೀರದ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿತ್ತು.

ಕ್ರಮೇಣ ಸ್ಥಿರ ದೂರವಾಣಿ ಸಂಪರ್ಕ ಮರುಸ್ಥಾಪಿಸಲಾಯಿತು. ಆದರೆ ಇಂಟರ್ನೆಟ್‌ ಮತ್ತು ಪ್ರಿಪೇಯ್ಡ್‌ ಮೊಬೈಲ್‌ ಸೇವೆಗಳ ಮೇಲಿನ ನಿರ್ಬಂಧ ಮುಂದುವರಿದಿತ್ತು.

ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಮೊಬೈಲ್‌ ಇಂಟರ್ನೆಟ್ ಸೇವೆಯ ಮೇಲೆ ನಿರ್ಬಂಧ ಹೇರಲಾಗಿದೆ. ರಾಜ್ಯದ ವಿವಿಧೆಡೆ ಇರುವ ಸುಮಾರು 900 ಇಂಟರ್ನೆಟ್‌ ಕೇಂದ್ರಗಳ ಮೂಲಕ ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡಲಾಗುತ್ತಿದೆ ಎಂದುಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT