ಗುರುವಾರ , ಜೂಲೈ 2, 2020
28 °C

ಸೋನು ಸೂದ್‌ಗೆ ಬಾಲಕಿಯ ಮನವಿ: ನನ್ನ ಅಮ್ಮನನ್ನು ಅಜ್ಜಿ ಮನೆಗೆ ಕಳುಹಿಸುತ್ತೀರಾ?

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Sonu Sood

ಮುಂಬೈ: ಲಾಕ್‍ಡೌನ್ ವೇಳೆ  ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ಮೂಲಕ ಬಾಲಿವುಡ್ ನಟ ಸೋನು ಸೂದ್ ದೇಶದ ಜನರ ಮನಗೆದ್ದಿದ್ದಾರೆ.

ಜನರು ಎಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ಅವರನ್ನು ಸುರಕ್ಷಿತವಾಗಿ ಅವರವರ ಜಾಗಕ್ಕೆ ತಲುಪಿಸುವ ಕಾರ್ಯ ಮಾಡುತ್ತಿರುವ ಸೋನುನಲ್ಲಿ ಬ್ಯೂಟಿ ಪಾರ್ಲರ್‌ಗೆ ತಲುಪಿಸಲು ಸಹಾಯ ಮಾಡುತ್ತೀರಾ? ಮದ್ಯದಂಗಡಿಗೆ ಹೋಗಲು ನೆರವು ನೀಡುತ್ತೀರಾ? ಎಂಬ ಪ್ರಶ್ನೆಗಳನ್ನು ಜನರು ಕೇಳಿದ್ದರು.

ಇದೀಗ ಪುಟ್ಟ ಹುಡುಗಿಯೊಬ್ಬಳು ಅವಳಪ್ಪನ ಪರವಾಗಿ ಸೋನುನಲ್ಲಿ ಸಹಾಯ ಬೇಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಟ್ವಿಟರ್‌ನಲ್ಲಿ ಅಪ್‍ಲೋಡ್ ಆಗಿರುವ ವಿಡಿಯೊದಲ್ಲಿ ಪುಟ್ಟ ಹುಡುಗಿ ಈ ರೀತಿ ಮನವಿ ಮಾಡಿದ್ದಾಳೆ. 'ಸೋನು ಅಂಕಲ್, ನೀವು ಜನರನ್ನು ಮನೆಗೆ ಕಳುಹಿಸುತ್ತಿದ್ದೀರಿ ಎಂದು ಕೇಳಿದ್ದೀನಿ. ಹಾಗಾಗಿ ಅಪ್ಪ ಕೇಳುತ್ತಿದ್ದಾರೆ, ಅಮ್ಮನನ್ನು ಅಜ್ಜಿ ಮನೆಗೆ ಕಳುಹಿಸುತ್ತೀರಾ' ಎಂದು.  ಈ ವಿಡಿಯೊವನ್ನು ಸೋನು ರೀಟ್ವೀಟ್ ಮಾಡಿ ಇದು ತುಂಬಾ ಸವಾಲಿನ ಕೆಲಸ. ನಾನು ಪ್ರಯತ್ನಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ವಲಸೆ ಕಾರ್ಮಿಕರನ್ನು ಮನೆಗೆ ಕಳುಹಿಸುವ ಕಾರ್ಯವನ್ನು ಮಾಡುತ್ತಿರುವ ಸೋನು, ಈಗ ನಿಜವಾದ ಹೀರೊ ಎಂದು ಮೆಚ್ಚುಗೆ ಗಳಿಸುತ್ತಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು