ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದ ಮೇಲೆ ಶೇ 70ರಷ್ಟು ಕೊರೊನಾ ತೆರಿಗೆ ವಿಧಿಸಿದ ದೆಹಲಿ ಸರ್ಕಾರ

Last Updated 4 ಮೇ 2020, 18:14 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ ಸೋಂಕು ನಿಯಂತ್ರಿಸಲು ಸರ್ಕಾರದೇಶದಾದ್ಯಂತ ಮೂರನೇ ಹಂತದ ಲಾಕ್‌ಡೌನ್‌ ಜಾರಿಗೆ ತಂದಿದ್ದು, ಮದ್ಯ ಮಾರಾಟ ಸೇರಿದಂತೆ ಕೆಲವು ಸಡಿಲಿಕೆಗಳನ್ನು ನೀಡಿದೆ. ಸೋಮವಾರ ದೇಶದ ಹಲವು ಭಾಗಗಳಲ್ಲಿ ಮದ್ಯದಂಗಡಿಗಳ ಮುಂದೆ ದೊಡ್ಡ ಸಾಲು ನಿರ್ಮಾಣವಾಗಿತ್ತು ಹಾಗೂ ಜನ ಸಂದಣಿಯೂ ಹೆಚ್ಚಿದೆ. ಇದರಿಂದ ಎಚ್ಚೆತ್ತಿರುವ ದೆಹಲಿ ಸರ್ಕಾರ ಮದ್ಯದ ಮೇಲೆ ಶೇ 70ರಷ್ಟು ಸುಂಕ ವಿಧಿಸಿದೆ.

ಮದ್ಯದ ಮೇಲೆ ದೆಹಲಿ ಸರ್ಕಾರ 'ವಿಶೇಷ ಕೊರೊನಾ ಶುಲ್ಕ' ವಿಧಿಸಿದ್ದು, ಮಂಗಳವಾರದಿಂದಲೇ ಜಾರಿಗೆ ಬರಲಿದೆ.

ಮದ್ಯದ ಗರಿಷ್ಠ ಮಾರಾಟದ ಬೆಲೆಯ ಮೇಲೆ ಶೇ 70ರಷ್ಟು ವಿಶೇಷ ಸುಂಕ ವಿಧಿಸಲಾಗಿದೆ.ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಸರ್ಕಾರದ ಆದಾಯಕ್ಕೂ ಪೆಟ್ಟು ಬಿದ್ದಿದ್ದು, ಮದ್ಯದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿರುವುದರಿಂದ ಸರ್ಕಾರಕ್ಕೆ ಆದಾಯ ಹೆಚ್ಚಳವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT