ಭಾನುವಾರ, ಮೇ 29, 2022
21 °C

ಸೂರತ್‌| ಭಾರಿ ಮಳೆ, ಗಾಳಿ: ರನ್‌ ವೇಯಿಂದ ಹೊರ ಹೋದ ವಿಮಾನ, ಪ್ರಯಾಣಿಕರು ಸುರಕ್ಷಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೂರತ್‌: ಭಾನುವಾರ ಭೋಪಾಲ್‌ನಿಂದ ಬಂದಿಳಿದ ಸ್ಪೈಸ್‌ಜೆಟ್‌ ವಿಮಾನ ಸೂರತ್‌ ವಿಮಾನ ನಿಲ್ದಾಣದಲ್ಲಿ ರನ್‌ ವೇಯಿಂದ ಹೊರಹೋಗಿದ್ದು, ಕೆಲಹೊತ್ತು ಆತಂಕ ಉಂಟಾಗಿತ್ತು. 

ಭಾರಿ ಮಳೆ ಮತ್ತು ಗಾಳಿಯಿಂದಾಗಿ ರಾತ್ರಿ 8.15ರ ವೇಳೆಯಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿದ್ದ 43 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ಪನಿಗ್ರಾಹಿ ತಿಳಿಸಿದ್ದಾರೆ. 

ಘಟನೆಯಿಂದಾಗಿ ಭಾನುವಾರ ರಾತ್ರಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು