ಮೈತ್ರಿಕೂಟ ಭಯೋತ್ಪಾದಕರ ಒಕ್ಕೂಟ: ಸಂಸತ್ತಿನಲ್ಲಿ ಸಂಘರ್ಷ ಸೃಷ್ಟಿಸಿದ ಹೇಳಿಕೆ

7

ಮೈತ್ರಿಕೂಟ ಭಯೋತ್ಪಾದಕರ ಒಕ್ಕೂಟ: ಸಂಸತ್ತಿನಲ್ಲಿ ಸಂಘರ್ಷ ಸೃಷ್ಟಿಸಿದ ಹೇಳಿಕೆ

Published:
Updated:

ನವದೆಹಲಿ: ಬಿಜೆಪಿ ವಿರೋಧಿ ಪಕ್ಷಗಳ ಮೈತ್ರಿಕೂಟವು ‘ಭಯೋತ್ಪಾದಕರ ಒಕ್ಕೂಟ’ ಎಂದು ಬಿಜೆಪಿ ಸಂಸದ ಹುಕುಂ ದೇವ್ ನಾರಾಯಣ್‌ ಯಾದವ್‌ ಅವರು ಹೇಳಿದ್ದು ಲೋಕಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಕೈ ಕೈ ಮಿಲಾಯಿಸುವಂತಹ ಸನ್ನಿವೇಶ ಸೃಷ್ಟಿಸಿತು.

‘ಕಳ್ಳರು, ಅಪ್ರಾಮಾಣಿಕರು ಮತ್ತು ದೇಶ ವಿರೋಧಿಗಳ ವಿರುದ್ಧ ನರೇಂದ್ರ ಮೋದಿ ಅವರು ಕ್ರಮ ಕೈಗೊಳ್ಳುತ್ತಿದ್ದಾರೆ. ಮತ್ತೊಂದೆಡೆ ಭಯೋತ್ಪಾದಕರು, ತೀವ್ರವಾದಿಗಳು, ಕೊಲೆಗಡುಕರು ಜತೆಯಾಗಿ ‘ಚೌಕೀದಾರ್‌ ಚೋರ್‌ ಹೇ’ ಎಂದು ಘೋಷಣೆ ಕೂಗುತ್ತಿದ್ದಾರೆ’ ಎಂದು ಹುಕುಂ ದೇವ್ ಹೇಳಿದರು.

ಹುಕುಂ ದೇವ್‌ ತಮ್ಮ ಹೇಳಿಕೆ ಹಿಂದಕ್ಕೆ ಪಡೆಯಬೇಕು ಎಂದು ಎಸ್‌ಪಿ ಸದಸ್ಯ ಧರ್ಮೇಂದ್ರ ಯಾದವ್ ಆಗ್ರಹಿಸಿದರು. ತೃಣಮೂಲ ಕಾಂಗ್ರೆಸ್‌ ಸಂಸದರಿಗೆ ಈ ಬಗ್ಗೆ ಅರಿವೇ ಇರಲಿಲ್ಲ. ಮಾತಿನ ಚಕಮಕಿ ಮುಂದುವರಿಯು
ತ್ತಿದ್ದಂತೆಯೇ, ಟಿಎಂಸಿಯ ಅಪರೂಪ ಪೊದ್ದಾರ್‌ ಮತ್ತು ಎಲ್‌ಜೆಪಿ ಸದಸ್ಯೆ ವೀಣಾ ದೇವಿ ಪರಸ್ಪರರಿಗೆ ಬೆದರಿಕೆ ಒಡ್ಡುವ ರೀತಿಯ ಸಂಜ್ಞೆ ಮಾಡಿದರು.

ಧರ್ಮೇಂದ್ರ ಅವರು ಹುಕುಂ ದೇವ್ ಅವರತ್ತ ಬೆದರಿಕೆ ಧಾಟಿಯ ಸಂಜ್ಞೆ ಮಾಡಿದಾಗ ಬಿಜೆಪಿಯ ಸಂಸದರು ಹುಕುಂ ದೇವ್‌ ಸುತ್ತ ನಿಂತರು. ಮುಂದೂ
ಡಿಕೆಯಾಗಿದ್ದ ಕಲಾಪ ಮತ್ತೆ ಸೇರಿದಾಗ ಹುಕುಂ ದೇವ್ ಅವರನ್ನು ಬಿಜೆಪಿ ಸಂಸದರು ಬೇರೊಂದು ಆಸನದತ್ತ ಕರೆದೊಯ್ದು ಕುಳ್ಳಿರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !