ಬುಧವಾರ, ಏಪ್ರಿಲ್ 1, 2020
19 °C
ತಿಂಗಳ ರೇಡಿಯೊ ಕಾರ್ಯಕ್ರಮ ‘ಮನದ ಮಾತಿ’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಲಹೆ

‘ನಮ್ಮೊಳಗಿನ ವಿದ್ಯಾರ್ಥಿ ಸಾಯದಿರಲಿ’

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ‘ನಮ್ಮೊಳಗಿನ ವಿದ್ಯಾರ್ಥಿಯನ್ನು ಯಾವತ್ತೂ ಸಾಯಲು ಬಿಡಬಾರದು. ಗುರಿ ಸಾಧನೆಗೆ ವಯಸ್ಸು ಅಥವಾ ಅಂಗವೈಕಲ್ಯ ಅಡ್ಡಿಯಾಗಬಾರದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ತಿಂಗಳ ರೇಡಿಯೊ ಕಾರ್ಯಕ್ರಮ ಮನದ ಮಾತಿನಲ್ಲಿ ಅವರು ಈ ವಿಚಾರ ವನ್ನು ಭಾನುವಾರ ಪ್ರಸ್ತಾಪಿಸಿದರು.

‘ನಮ್ಮ ಪ್ರಗತಿಯ ದಾರಿಯನ್ನು ನಾವೇ ಕಂಡುಕೊಳ್ಳಬೇಕು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಗುರಿ ಹೊಂದಿದ್ದರೆ, ನಮ್ಮೊಳಗಿನ ವಿದ್ಯಾರ್ಥಿಯನ್ನು ಸಾಯಲು ಬಿಡಬಾರದು’ ಎಂದ ಅವರು, ತಮ್ಮ ಮಾತಿಗೆ ಪೂರಕವಾಗಿ 105ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದ ಕೇರಳದ ಮಹಿಳೆ ಭಾಗೀರಥಿ ಅಮ್ಮ,
12ನೇ ವಯಸ್ಸಿನಲ್ಲಿ ದಕ್ಷಿಣ ಅಮೆರಿಕದ ಅಕೊನಕಾಗುವ ಪರ್ವತವನ್ನು ಏರಿದ ಬಾಲಕಿ ಕಾಮ್ಯಾ ಕಾರ್ತಿಕೇಯನ್‌, ಹಾಗೂ ಚಪ್ಪಲಿ ತಯಾರಿಕಾ ಘಟಕವನ್ನು ಆರಂಭಿಸಿದ ಉತ್ತರಪ್ರದೇಶದ ಅಂಗವಿಕಲ ವ್ಯಕ್ತಿ ಸಲ್ಮಾನ್‌ ಅವರ ಸಾಧನೆಗಳನ್ನು ಉಲ್ಲೇಖಿಸಿದರು. ಜತೆಗೆ ಯಾವುದಾದರೂ ಸಾಹಸ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಜನರಿಗೆ ಸಲಹೆ ನೀಡಿದರು.

ಜೀವವೈವಿಧ್ಯ ರಕ್ಷಣೆಯ ಅಗತ್ಯ ವನ್ನು ಉಲ್ಲೇಖಿಸುತ್ತಾ, ‘ಜೀವ ವೈವಿ ಧ್ಯವು ಭಾರತದ ಅಮೂಲ್ಯ ನಿಧಿ. ಮಾನವ ಕುಲದ ಅಭಿವೃದ್ಧಿಯಾ ಬೇಕಾದರೆ ಅದನ್ನು ಸಂರಕ್ಷಿಸುವುದು ಅಗತ್ಯ’ ಎಂದರು.

ತಮಿಳು ಕವಿ ಅವ್ವಯ್ಯಾರ್‌ ಅವರ, ‘ನಮ್ಮ ಕೈಯಲ್ಲಿ ಇರುವುದು ಒಂದು ಹಿಡಿ ಮರಳು ಅಷ್ಟೇ. ಹೊರಗೆ
ಬ್ರಹ್ಮಾಂಡದಷ್ಟಿದೆ’ ಎಂಬ ಮಾತನ್ನು ಉಲ್ಲೇಖಿಸಿ, ‘ಈ ಮಾತು ನಮ್ಮ ಜೀವ ವೈವಿಧ್ಯಕ್ಕೂ  ಅನ್ವಯವಾಗುತ್ತದೆ. ನಾವು ಜ್ಞಾನ ಸಂಪಾದಿಸುತ್ತಾ ಹೋದಂತೆ, ತಿಳಿಯಬೇಕಾದ್ದು ಸಾಗರದಷ್ಟಿದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಎಲ್ಲಾ ಪ್ರಾಣಿಗಳ ಬಗ್ಗೆ ಸಹಾನುಭೂತಿ, ಅನುಕಂಪ ತೋರಿಸುವುದು ಮತ್ತು ನಿಸರ್ಗದ ಜತೆ ಅಪಾರವಾದ ಪ್ರೀತಿಯೇ ನಮ್ಮ ಸಂಸ್ಕೃತಿ ಮತ್ತು ಪರಂಪರೆಯಾಗಿದೆ’ ಎಂದರು.

ಮೇಘಾಲಯದ ಗುಹೆಗಳ ಮೇಲ್ಪದರದಲ್ಲಿ ಅಪರೂಪದ ಮೀನಿನ ಸಂತತಿಯನ್ನು ಪತ್ತೆಹಚ್ಚಿರುವು
ದಾಗಿ ನಮ್ಮ ಜೀವಶಾಸ್ತ್ರಜ್ಞರು ಇತ್ತೀಚೆಗೆ ಹೇಳಿದ್ದಾರೆ. ಇಂಥ ಅಪರೂಪದ ಜೀವ ಸಂಕುಲಕ್ಕೆ ತಾಣವಾಗಿದೆ ಎಂಬುದು ಮೇಘಾಲಯಕ್ಕೆ ಮತ್ತು ಅಲ್ಲಿನ ಜನರಿಗೆ ಸಂತಸ ಹಾಗೂ ಹೆಮ್ಮೆಯ ವಿಚಾರ’ ಎಂದರು.

ದೆಹಲಿಯಲ್ಲಿ ಈಚೆಗೆ ಆಯೋಜಿಸಿದ್ದ ಗ್ರಾಮೀಣ ಕರಕುಶಲ ವಸ್ತು ಪ್ರದರ್ಶ ನವನ್ನು ಉಲ್ಲೇಖಿಸಿದ ಮೋದಿ, ‘ದೇಶದ ಸಾಂಸ್ಕೃತಿಕ ವೈಭವ ಮತ್ತು ಆಹಾರ ವೈವಿಧ್ಯಕ್ಕೆ ಇಂಥ ಪ್ರದರ್ಶನಗಳು ಸಾಕ್ಷಿಯಾಗಿವೆ. ಇಂಥ
ಪ್ರದರ್ಶನಗಳಿಗೆ ಭೇಟಿನೀಡುವ ಮೂಲಕ ಪ್ರತಿಯೊಬ್ಬರೂ ಕುಶಲಕರ್ಮಿಗಳ ಪ್ರಗತಿಗೆ ನೆರವಾಗಬಹುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು