ಸೋಮವಾರ, ಮಾರ್ಚ್ 8, 2021
31 °C
ಸಿಗದ ಹೆಚ್ಚಿನ ಸಮಯಾವಕಾಶ

ಮಾತಿಗೆ ಅಧಿಕ ಅವಕಾಶ ನೀಡದ ಸ್ಪೀಕರ್‌: ದೇವೇಗೌಡ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಲೋಕಸಭೆಯಲ್ಲಿ ಬಹುಶಃ ಕೊನೆಯದಾಗಿ ಮಾತನಾಡಬಹುದು ಎಂದು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರಿಗೆ ತಿಳಿಸಿ ಮನವಿ ಮಾಡಿಕೊಂಡರೂ ಭಾಷಣಕ್ಕೆ ಹೆಚ್ಚಿನ ಅವಕಾಶ ನೀಡದೆ, ಬರೀ 5 ನಿಮಿಷಕ್ಕೇ ಮಾತು ಮುಗಿಸುವಂತೆ ಸೂಚಿಸಿದ್ದು ನನಗೆ ತೀವ್ರ ನೋವುಂಟು ಮಾಡಿದೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅಳಲು ತೋಡಿಕೊಂಡರು.

ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಲು ಗುರುವಾರ ಅವಕಾಶ ನೀಡಿದ್ದ ಸ್ಪೀಕರ್‌, 5 ನಿಮಿಷದೊಳಗೇ ಮಾತಿಗೆ ವಿರಾಮ ಹೇಳುವಂತೆ ಸೂಚಿಸಿದರು. ಮಾತನಾಡಲು ಅವಕಾಶ ನೀಡುವಂತೆ ಇಂದೂ ಕೋರಿದ್ದೆ. ಆದರೂ ಅವರು ಅವಕಾಶ ನಿರಾಕರಿಸಿದರು ಎಂದು ಸುದ್ದಿಗಾರರೆದುರು ನೋವು ತೋಡಿಕೊಂಡರು.

‘ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಬಗ್ಗೆ ವ್ಯಂಗ್ಯವಾಡಿದರು. ಜೆಡಿಎಸ್‌– ಕಾಂಗ್ರೆಸ್‌ ನೇತೃತ್ವದ ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಾಲವನ್ನು ಸಮರ್ಪಕವಾಗಿ ಮನ್ನಾ ಮಾಡಿಲ್ಲ ಎಂದು ಟೀಕಿಸಿದರು. ಆದರೆ, ಅವರು ಆ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. ಪ್ರತಿ
ಕ್ರಿಯೆ ನೀಡಲೆಂದೇ ಸಮಯ ಕೋರಿದ್ದೆ. ಆದರೆ ಅವಕಾಶ ಸಿಗಲಿಲ್ಲ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು