ಶುಕ್ರವಾರ, ಅಕ್ಟೋಬರ್ 18, 2019
27 °C
₹ 1ಕೋಟಿ ಗೆದ್ದ ಬಬಿತಾ ತಾಡೆ

‘ಕೌನ್ ಬನೋಗಾ ಕರೋಡ್‌ಪತಿ’ | ‘ಕೋಟಿ’ ವಿಜೇತೆ ಚುನಾವಣಾ ಪ್ರಚಾರ ರಾಯಭಾರಿ

Published:
Updated:

ಅಮರಾವತಿ (ಮಹಾರಾಷ್ಟ್ರ, ಪಿಟಿಐ): ‘ಕೌನ್ ಬನೋಗಾ ಕರೋಡ್‌ಪತಿ’ (ಕೆಬಿಸಿ) ಕಾರ್ಯಕ್ರಮದಲ್ಲಿ ₹ 1 ಕೋಟಿ ಗಳಿಸಿರುವ ಬಬಿತಾ ತಾಡೆ ಅವರನ್ನು ಅಮರಾವತಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಲಾಗಿದೆ.

‘ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಭಾಗವಹಿಸುವಿಕೆ (ಸ್ವೀಪ್‌) ಕಾರ್ಯಕ್ರಮದ ಮೂಲಕ ಬಬಿತಾ ಅವರು ಮತದಾರರಲ್ಲಿ ಜಾಗೃತಿ ಮೂಡಿಸಲಿದ್ದಾರೆ’ ಎಂದು ಅಮರಾವತಿ ಜಿಲ್ಲಾ ಪರಿಷತ್‌ನ ಮುಖ್ಯ ಕಾರ್ಯ
ನಿರ್ವಹಣಾಧಿಕಾರಿ ಮನೀಷ್ ಖತ್ರಿ ತಿಳಿಸಿದ್ದಾರೆ 

‘ಮತದಾನ ರಾಷ್ಟ್ರೀಯ ಕರ್ತವ್ಯ. ಹಳ್ಳಿಗಳಲ್ಲಿರುವ ಸಮುದಾಯದೊಂದಿಗೆ ಬೆರೆತು, ಪ್ರಜಾಪ್ರಭುತ್ವದಲ್ಲಿ ತಮ್ಮ ಹಕ್ಕಿನ ಚಲಾವಣೆಯ ಕುರಿತು ತಿಳಿವಳಿಕೆ ಮೂಡಿಸಲಿದ್ದೇನೆ’ ಎಂದು ಬಬಿತಾ ಹೇಳಿದ್ದಾರೆ. 

 

Post Comments (+)