ಬುಧವಾರ, ಆಗಸ್ಟ್ 4, 2021
26 °C

ತಮಿಳುನಾಡು: ಉನ್ನತ ಶಿಕ್ಷಣ ಸಚಿವರಿಗೆ ಕೊರೊನಾ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ.ಪಿ. ಅನ್ಬಳಗನ್‌ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸಚಿವರ ಗಂಟಲು ದ್ರವ ಪರೀಕ್ಷೆ ಬಳಿಕ ಗುರುವಾರ ಸೋಂಕು ದೃಢಪಟ್ಟಿದ್ದರಿಂದ ಅವರು ಇಲ್ಲಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ ಎಂದು  ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.

ನಗರದಲ್ಲಿ ಕೋವಿಡ್‌– 19 ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ರಚಿಸಿದ್ದ ಸಮನ್ವಯ ಸಮಿತಿ ಸದಸ್ಯರಲ್ಲಿ ಸಚಿವರೂ ಸೇರಿದ್ದಾರೆ.

ಸಚಿವರು ಬುಧವಾರದಂದು ಪರಿಶೀಲನಾ ಸಭೆಯಲ್ಲೂ ಭಾಗವಹಿಸಿದ್ದು ಇದರಲ್ಲಿ ಆರು ಮಂದಿ ಸದಸ್ಯರು ಪಾಲ್ಗೊಂಡಿದ್ದರು. ನಂತರದಲ್ಲಿ ಅವರು ಮಾಧ್ಯಮದವರ ಜತೆಯೂ ಮಾತನಾಡಿದ್ದರು. ಈ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳದೇ ಇದ್ದದ್ದು ಟೀಕೆಗೂ ಒಳಗಾಗಿತ್ತು.

ಸಚಿವರಿಗೆ ಸೋಂಕು ಇರುವುದನ್ನು ಅಧಿಕಾರಿಗಳು ದೃಢಪಡಿಸಿದ್ದರೂ, ತಾವು ಆರೋಗ್ಯದಿಂದಿರುವುದಾಗಿ ತಮಿಳು ಸುದ್ದಿ ವಾಹಿನಿಗಳಿಗೆ ಅವರು ಹೇಳಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು