ಗುರುವಾರ , ಜುಲೈ 29, 2021
21 °C

ಟಿವಿ, ಫೋನ್ಇಲ್ಲ: ಆನ್‌ಲೈನ್‌ ಕ್ಲಾಸ್ ಮಿಸ್ ಆದದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಆನ್‌ಲೈನ್‌ ಕ್ಲಾಸ್‌ ಮಿಸ್‌ ಮಾಡಿಕೊಂಡದ್ದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

ಮನೆಯಲ್ಲಿ ಟಿವಿ ಮತ್ತು ಸ್ಮಾರ್ಟ್‌ಫೋನ್ ಇಲ್ಲದಿರುವುದರಿಂದ ವಿದ್ಯಾರ್ಥಿನಿಯು ಆನ್‌ಲೈನ್‌ ಕ್ಲಾಸ್‌ ಮಿಸ್‌ ಮಾಡಿಕೊಂಡಿದ್ದು, ಇದು ಆತ್ಮಹತ್ಯೆ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. 

ತನ್ನ ಮನೆ ಎದುರು ಇರುವ ಖಾಲಿ ಮನೆಯಲ್ಲಿ ಆತ್ಮಹತ್ಮೆ ಮಾಡಿಕೊಂಡಿರುವ, ಬಾಲಕಿಯನ್ನು ದೇವಿಕಾ ಬಾಲಕೃಷ್ಣನ್‌ (14) ಎಂದು ಗುರುತಿಸಲಾಗಿದೆ.

ಈ ಸಂಬಂಧ ಪೊಲೀಸರು ‘ಅಸ್ವಾಭಾವಿಕ ಸಾವು’ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಕೆಯ ಕೊಠಡಿಯಲ್ಲಿ ಮರಣ ಪತ್ರ ಸಿಕ್ಕಿದ್ದು, ಅದರಲ್ಲಿ ‘ನಾನು ಹೊರಟೆ’ ಎಂದು ಬರೆಯಲಾಗಿದೆ.

ಆಕೆಯ ತಂದೆ ಬಾಲಕೃಷ್ಟನ್‌ ದಿನಗೂಲಿ ಕಾರ್ಮಿಕರಾಗಿದ್ದು, ಆನ್‌ಲೈನ್‌ ತರಗತಿಗೆ ಹಾಜರಾಗಲು ಸಾಧ್ಯವಾಗದೇ ಇದ್ದುದರಿಂದ ದೇವಿಕಾ ಖಿನ್ನತೆಗೊಳಗಾಗಿದ್ದಳು ಎಂದು ಹೇಳಿದ್ದಾರೆ.

‘ಆನ್‌ಲೈನ್‌ ತರಗತಿಯಲ್ಲಿ ಭಾಗವಹಿಸುವ ಸಲುವಾಗಿ ಅವಳು ಟಿವಿ ರಿಪೇರಿ ಮಾಡಿಸುವಂತೆ ನಮಗೆ ಹೇಳುತ್ತಿದ್ದಳು. ಆದರೆ, ಅದಕ್ಕಾಗಿ ಮತ್ತು ಸ್ಮಾರ್ಟ್‌ಫೋನ್‌ ಕೊಂಡುಕೊಳ್ಳಲು ನಮ್ಮ ಬಳಿ ಹಣವಿರಲಿಲ್ಲ’ ಎಂದೂ ಪೊಲೀಸರೆದುರು ನೋವು ತೋಡಿಕೊಂಡಿದ್ದಾರೆ.

ತನಿಖೆಪ್ರಗತಿಯಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು