ಮಂಗಳವಾರ, ಜೂನ್ 2, 2020
27 °C

ಛತ್ತೀಸಗಡ: ಇಬ್ಬರು ನಕ್ಸಲರ ಹತ್ಯೆಗೈದ ಭದ್ರತಾ ಪಡೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ರಾಯಪುರ: ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ನಕ್ಸಲರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ ಮೃತಪಟ್ಟ ಮಾವೋವಾದಿ ನಕ್ಸಲರನ್ನು ಮಲಂಗೀರ್ ಪ್ರದೇಶ ಸಮಿತಿಯ ಕಮಾಂಡರ್ ಗುಂಡಾಧುರ್ ಮತ್ತು ವಿಭಾಗೀಯ ಸಮಿತಿ ಸದಸ್ಯ ವಿನೋದ್ ಎಂದು ಗುರುತಿಸಲಾಗಿದೆ. 

'ಮಂಕಪಾಲ್ ಗ್ರಾಮದ ಬಳಿ ರಾತ್ರಿ 12.45 ಕ್ಕೆ ಕಾರ್ಯಾಚರಣೆ ಪ್ರಾರಂಭವಾಯಿತು, ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ತಂಡವು ಗಸ್ತು ಕಾರ್ಯಾಚರಣೆಗೆ ತೆರಳಿದ್ದಾಗ ಮಾವೋವಾದಿಗಳ ಜೊತೆ ಗುಂಡಿನ ಕಾಳಗ ನಡೆಯಿತು. ಆ ಸಮಯದಲ್ಲಿ ಇಬ್ಬರು ಮಾವೋವಾದಿಗಳು ಭದ್ರತಾ ಪಡೆಯ ಗುಂಡಿಗೆ ಸಿಕ್ಕು ಹತ್ಯೆಯಾಗಿದ್ದಾರೆ' ಎಂದು ಪೊಲೀಸ್‌ ಮಹಾನಿರ್ದೇಶಕ ಡಿ.ಎಂ. ಅವಸ್ಥಿ ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು