ಬುಧವಾರ, ಜುಲೈ 15, 2020
22 °C

ಅನ್‌ಲಾಕ್ 2 | ಕೇಂದ್ರದ ಹೊಸ ಮಾರ್ಗಸೂಚಿ; ಜುಲೈನಲ್ಲೂ ಶಾಲಾ–ಕಾಲೇಜು ಇಲ್ಲ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರವು ಸೋಮವಾರ ರಾತ್ರಿ ‘ಅನ್‌ಲಾಕ್–2’ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಶಿಕ್ಷಣ ಸಂಸ್ಥೆಗಳನ್ನು ಜುಲೈ 31ರವರೆಗೆ ತೆರೆಯಲು ಅವಕಾಶವಿಲ್ಲ. ಮೆಟ್ರೊ ರೈಲು, ಸಿನಿಮಾ ಮಂದಿರಗಳು ಮತ್ತು ಜಿಮ್‌ ತೆರೆಯಲೂ ಅವಕಾಶವಿಲ್ಲ ಎಂದು ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಜುಲೈ 1ರಿಂದ ಈ ಹೊಸ ಮಾರ್ಗಸೂಚಿಗಳು ಜಾರಿಯಾಗಲಿವೆ. ‘ಅನ್‌ಲಾಕ್‌–1’ ಜೂನ್‌ 30ರಂದು ಅಂತ್ಯವಾಗಲಿದೆ.

ಹೆಚ್ಚು ಜನರು ಸೇರುವ ರಾಜಕೀಯ, ಸಾಮಾಜಿಕ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳಿಗೂ ಅವಕಾಶವಿಲ್ಲ. ಈ ಚಟುವಟಿಕೆಗಳಿಗೆ ಅವಕಾಶ ನೀಡುವ ಬಗ್ಗೆ ಪರಿಸ್ಥಿತಿ ಅವಲೋಕಿಸಿ ಪ್ರತ್ಯೇಕವಾಗಿ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರಗಳ ಜೊತೆ ಚರ್ಚಿಸಿದ ಬಳಿಕ ಈ ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ಗೃಹ ಸಚಿವಾಲಯವು ತಿಳಿಸಿದೆ.

ಹೊಸ ನಿಯಮಾವಳಿಗಳು
* ದೇಶೀಯ ವಿಮಾನ ಸಂಚಾರ ಮತ್ತು ರೈಲು ಸಂಚಾರ ಹಂತಹಂತವಾಗಿ ವಿಸ್ತರಣೆ
* ಪ್ರತಿರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ
* ಕಾರ್ಯನಿರ್ವಹಿಸುತ್ತಿರುವ ಸ್ಥಳವನ್ನು ಆಧರಿಸಿ, ಅಂಗಡಿಗಳಲ್ಲಿ 5ಕ್ಕಿಂತ ಹೆಚ್ಚು ಜನರು ಇರಲು ಅವಕಾಶ
* ಜುಲೈ 15ರ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತರಬೇತಿ ಕೇಂದ್ರಗಳ ಕಾರ್ಯನಿರ್ವಹಣೆಗೆ ಅವಕಾಶ
* ಜುಲೈ 31ರವರೆಗೆ ಶಾಲೆ, ಕಾಲೇಜು ಮತ್ತು ಕೋಚಿಂಗ್‌ ಇನ್‌ಸ್ಟಿಟ್ಯೂಟ್‌ಗಳು ತೆರೆಯಲು ಅವಕಾಶವಿಲ್ಲ.
* ಅಂತರರಾಷ್ಟ್ರೀಯ ವಿಮಾನ ಪ್ರಯಾಣಕ್ಕೂ ಹಂತಹಂತವಾಗಿ ಅವಕಾಶ
* ಮೆಟ್ರೊ ರೈಲು, ಸಿನಿಮಾ ಮಂದಿರ, ಈಜುಕೊಳ, ಜಿಮ್ನಾಶಿಯಂ, ಬಾರ್‌, ಆಡಿಟೋರಿಯಂ, ಸಭಾ ಮಂಟಪಗಳು, ಹೆಚ್ಚು ಜನರು ಸೇರುವ ಸಮಾರಂಭಗಳಿಗೆ ಕಂಟೇನ್‌ಮೆಂಟ್‌ ವಲಯಗಳ ಹೊರಗೂ ಅವಕಾಶವಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು