ಮುಜಫ್ಪರನಗರ, ಉತ್ತರ ಪ್ರದೇಶ:ಶಾಮ್ಲಿ ಜಿಲ್ಲೆಯಲ್ಲಿ ಕೋವಿಡ್–19 ಹರಡಿದ್ದಾರೆ ಎಂಬ ಆರೋಪದ ಮೇಲೆ ಕರ್ನಾಟಕ ಹಾಗೂ ಅಸ್ಸಾಂ ರಾಜ್ಯಗಳಿಗೆ ಸೇರಿದ, ತಬ್ಲೀಗ್ ಜಮಾತ್‌ನ 24 ಸದಸ್ಯರ ವಿರುದ್ಧ ಬುಧವಾರ ಇಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ಕೈರಾನಾ ಪಟ್ಟಣದ ಪಟ್ವಾರಿ ಮಸೀದಿಯಲ್ಲಿ ಈ 24 ಜನರು ಕಳೆದ ಏಪ್ರಿಲ್ 23ರಿಂದ ತಂಗಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಐಪಿಸಿ ಹಾಗೂ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿ ಯಶಪಾಲ್ ಧಾಮಾ ತಿಳಿಸಿದ್ದಾರೆ.

10 ಜನರ ವಿರುದ್ಧ ಪ್ರಕರಣ: ಜಿಲ್ಲೆಯ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶೇರ್‌ನಗರ ಗ್ರಾಮದ ಮಸೀದಿಯಲ್ಲಿ ಸಹ ತಬ್ಲೀಗ್ ಜಮಾತ್‌ನ 10 ಸದಸ್ಯರು ತಂಗಿದ್ದರು. ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪೈಕಿ ಒಬ್ಬರಲ್ಲಿ ಕೋವಿಡ್–19 ಇರುವುದು ದೃಢಪಟ್ಟಿದ್ದು, ಗ್ರಾಮವನ್ನು ಹಾಟ್‌ಸ್ಪಾಟ್ ಎಂದು ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.