ಭಾನುವಾರ, ಜೂಲೈ 12, 2020
22 °C

25 ಶಾಲೆಗಳಲ್ಲಿ ಕೆಲಸ, ₹1 ಕೋಟಿ ಸಂಬಳ ಪಡೆದ ಶಿಕ್ಷಕಿ!

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ಲಖನೌ: ‘ಏಕಕಾಲ‘ಕ್ಕೆ 25 ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂಬ ಆರೋಪ ಹೊತ್ತ ಈ ಶಿಕ್ಷಕಿ, ಕಳೆದ 15 ತಿಂಗಳಲ್ಲಿ ಪಡೆದ ಸಂಬಳ ₹ 1 ಕೋಟಿಗೂ ಅಧಿಕ!

ಅನಾಮಿಕಾ ಶುಕ್ಲಾ ಎಂಬುವವರೇ ಇಷ್ಟು ದೊಡ್ಡ ಮೊತ್ತದ ಸಂಬಳ ಪಡೆದ ಶಿಕ್ಷಕಿ. ತಮ್ಮ ವಿರುದ್ಧ ಆರೋಪ ಕೇಳಿಬಂದಿದ್ದೇ ತಡ ಆಕೆ ತಲೆಮರೆಸಿಕೊಂಡಿದ್ದಾರೆ. ಕಸ್ತೂರ್ಬಾ ಗಾಂಧಿ ಬಾಲಕಿಯರ ಶಾಲೆಯ (ಕೆಜಿಜಿಎಸ್‌) ಶಿಕ್ಷಕಿಯಾಗಿರುವ ಅನಾಮಿಕಾ ಅವರ ಹೆಸರು ಒಟ್ಟು 25 ಶಾಲೆಗಳ ಸಿಬ್ಬಂದಿ ಪಟ್ಟಿಯಲ್ಲಿ ಇದೆ ಎಂದು ಆರೋಪಿಸಲಾಗಿದೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಈ ಶಿಕ್ಷಕಿ ವಿರುದ್ಧದ ಆರೋಪವನ್ನು ದೃಢಪಡಿಸುತ್ತಿಲ್ಲ. ಮತ್ತೊಂದೆಡೆ ನಿರಾಕರಿಸುತ್ತಲೂ ಇಲ್ಲ. ಈ ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದಷ್ಟೇ ಹೇಳುತ್ತಿದ್ದಾರೆ.

‘ಯಾವುದೂ ಇನ್ನು ದೃಢವಾಗಿಲ್ಲ. ತನಿಖೆ ನಡೆಯುತ್ತಿದೆ. ಶಿಕ್ಷಕಿಯ ಹೆಸರು ಈಗಷ್ಟೇ ಬಹಿರಂಗವಾಗಿದೆ. ಆಕೆ ತಲೆಮರೆಸಿಕೊಂಡಿದ್ದಾರೆ. ಆಕೆ ₹1 ಕೋಟಿ ಸಂಬಳ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಖಚಿತವಾಗಿಲ್ಲ,’ ಎಂದು ಶಾಲಾ ಶಿಕ್ಷಣ ಇಲಾಖೆಯ ಮಹಾ ನಿರ್ದೇಶಕ ವಿಜಯ್‌ ಕಿರಣ್‌ ಆನಂದ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು