ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂದೇ ಭಾರತ್‌ ಮಿಷನ್‌: ಅಮೆರಿಕದಿಂದ 225 ಜನರನ್ನು ಕರೆತಂದ ಏರ್ ಇಂಡಿಯಾ ವಿಮಾನ

Last Updated 11 ಮೇ 2020, 1:34 IST
ಅಕ್ಷರ ಗಾತ್ರ

ಮುಂಬೈ: ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಅಮೆರಿಕದಿಂದ ಮೊದಲ ಹಂತದಲ್ಲಿ 225 ಮಂದಿಯನ್ನು ಭಾರತಕ್ಕೆ ಕರೆಸಿಕೊಳ್ಳಲಾಗಿದೆ.

ವಂದೇ ಭಾರತ್‌ ಮಿಷನ್‌ ಅಡಿ 225 ಜನರನ್ನು ಒಳಗೊಂಡ ಏರ್ ಇಂಡಿಯಾ ವಿಶೇಷ ವಿಮಾನ ಮುಂಬೈ ತಲುಪಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೋಮವಾರ ಮುಂಜಾನೆ ಹೇಳಿದ್ದಾರೆ.

ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ಮೊದಲ ಹಂತದಲ್ಲಿ ಸಾನ್ ಫ್ರಾನ್ಸಿಸ್ಕೊ, ಷಿಕಾಗೊ, ನ್ಯೂಯಾರ್ಕ್‌, ವಾಷಿಂಗ್ಟನ್ ಡಿಸಿ ನಗರಗಳಿಂದ ನವದೆಹಲಿ, ಮುಂಬೈ, ಹೈದರಾಬಾದ್, ಅಹಮದಾಬಾದ್, ಚೆನ್ನೈ ಮತ್ತು ಬೆಂಗಳೂರಿಗೆ ವಿಶೇಷ ವಿಮಾನಗಳಲ್ಲಿ ಭಾರತೀಯರನ್ನು ಕರೆತರಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು. ಈ ಪೈಕಿ ಮೊದಲ ವಿಮಾನ ಭಾರತ ತಲುಪಿದೆ.

ಮೊದಲ ಹಂತದಲ್ಲಿ ಸುಮಾರು 1,961 ಭಾರತೀಯರು 7 ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಬರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಭಾನುವಾರ ಬ್ರಿಟನ್‌ನಿಂದ 326 ಭಾರತೀಯರನ್ನು ಒಳಗೊಂಡ ಏರ್‌ ಇಂಡಿಯಾ ವಿಮಾನ ಮುಂಬೈ ತಲುಪಿತ್ತು. ಮತ್ತೊಂದೆಡೆ, ಮಾಲ್ಡೀವ್ಸ್ ರಾಜಧಾನಿ ಮಾಲೆಯಿಂದ 698 ಜನರನ್ನು ಒಳಗೊಂಡ ಐಎನ್‌ಎಸ್ ಜಲಾಶ್ವ ನೌಕೆಯು ಕೇರಳದ ಕೊಚ್ಚಿ ಬಂದರು ತಲುಪಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT